Select Your Language

Notifications

webdunia
webdunia
webdunia
webdunia

ತಿಂಗಳಿಗೆ ಸರಿಯಾಗಿ ಮುಟ್ಟಾಗುತ್ತಿಲ್ಲವೇ?

ತಿಂಗಳಿಗೆ ಸರಿಯಾಗಿ ಮುಟ್ಟಾಗುತ್ತಿಲ್ಲವೇ?
ಮೈಸೂರು , ಭಾನುವಾರ, 2 ಜನವರಿ 2022 (15:16 IST)
ಹೆಣ್ಣುಮಕ್ಕಳು ಬೇಗ ಋತುಮತಿಯಾದರೂ ಪೀರಿಯಡ್ಸ್ ಮಾತ್ರ ಸಮಯಕ್ಕೆ ಸರಿಯಾಗಿ ಆಗುವುದಿಲ್ಲ.

ಹೆಚ್ಚಿನ ಬಾರಿ ತಡವಾಗಿ ತಲೆ ನೋವು ತರುತ್ತದೆ. ಕೆಲವೊಮ್ಮೆ ಬೇರೆ ಬೇರೆ ಆರೋಗ್ಯ ಸಮಸ್ಯೆಗಳ ಕಾರಣಕ್ಕೂ ಪೀರಿಯಡ್ಸ್ ತಡವಾಗಬಹುದು. ಮತ್ತೆ ಕೆಲವೊಮ್ಮೆ ಈ ಪೀರಿಯಡ್ಸ್ ಇರೆಗ್ಯುಲಾರಿಟಿಯಿಂದ ಬೊಜ್ಜಿನಂತ ಆರೋಗ್ಯ ಸಮಸ್ಯೆಗಳು ಶುರುವಾಗಬಹುದು.

ಪಪ್ಪಾಯ

ಪಪ್ಪಾಯ ಹಣ್ಣು ಇಲ್ಲವೇ ಜ್ಯೂಸ್ ತ್ವಚೆಯ ಕಾಂತಿಯನ್ನು ಹೆಚ್ಚಿಸುವ ವಿಷಯ ಗೊತ್ತೇ ಇದೆ. ಇದರೊಂದಿಗೆ ಪಪ್ಪಾಯ ಸೇವನೆಯು ಪೀರಿಯಡ್ಸ್ ಸೈಕಲ್ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ.

ಪಾರ್ಸ್ಲಿ

ಔಷಧೀಯ ಗುಣಗಳಿಂದ ಸಮೃದ್ಖವಾಗಿರುವ ಪಾರ್ಸ್ಲಿಯು ಅಡುಗೆಗೆ ರುಚಿ ಕೊಡುವುದಷ್ಟೇ ಅಲ್ಲ, ಮುಟ್ಟಿನ ಚಕ್ರವನ್ನೂ ನಿಯಮಿತಗೊಳಿಸುತ್ತದೆ. ಇದಕ್ಕೆ ಕಾರಣ ಪಾರ್ಸ್ಲಿಯಲ್ಲಿರುವ ಎಪಿಯೋಲ್ ಹಾಗೂ ಮಿರಿಸ್ಟಿಸಿನ್.

ಶುಂಠಿ ಲವಂಗ ಟೀ

ಶುಂಠಿ ಹಾಗೂ ಲವಂಗ ಎರಡೂ ಸೇರಿ ದೇಹದಲ್ಲಿ ಉಷ್ಣ ಹೆಚ್ಚಿಸುತ್ತವೆ. ಉಷ್ಣ ಹೆಚ್ಚಾದಾಗ ಮುಟ್ಟು ಬೇಗಾಗುತ್ತದೆ. ಪಾರ್ಸ್ಲಿ ಹಾಗೂ ಶುಂಠಿಯನ್ನು ಒಟ್ಟಿಗೆ ಹಾಕಿ ಕೂಡಾ ಟೀ ಮಾಡಬಹುದು.

ಕೊತ್ತಂಬರಿ ಬೀಜ

ಕೊತ್ತಂಬರಿ ಕಷಾಯ ಕೋವಿಡ್ ಸಮಯದಲ್ಲಿ ಬಹಳ ಜನಪ್ರಿಯತೆ ಪಡೆದಿತ್ತು. ಕೊತ್ತಂಬರಿ ಬೀಜ ಹಾಗೂ ಜೀರಿಗೆಯನ್ನು ಒಟ್ಟಾಗಿ ನೀರಿನಲ್ಲಿ ಕುದಿಸಿ, ಸೋಸಿ ಪ್ರತಿ ದಿನ ಬೆಳಗ್ಗೆ ಕುಡಿಯುವುದರಿಂದ ಪೀರಿಯಡ್ಸ್ ಬೇಗ ಆಗಲಿದೆ.

ಬೀಟ್ರೂಟ್

ಬೀಟ್ರೂಟ್ ಐರನ್, ಕ್ಯಾಲ್ಶಿಯಂ, ಫೋಲಿಕ್ ಆ್ಯಸಿಡ್ಗಳ ಕಣಜ. ಪೀರಿಯಡ್ಸ್ ಸಮಯದ ಕಿರಿಕಿರಿಗಳನ್ನು ಇದು ಕಡಿಮೆಗೊಳಿಸುತ್ತದೆ. ಅದರೊಂದಿಗೆ ಪೀರಿಯಡ್ಸ್ನಲ್ಲಿ ದೇಹ ಕಳೆದುಕೊಳ್ಳುವ ಕಬ್ಬಿಣಾಂಶವನ್ನೂ ತುಂಬಿ ಕೊಡಲಿದೆ.

 
ಅರಿಶಿನ

ಅರಿಶಿನದಿಂದ ಮಾಡಲು ಸಾಧ್ಯವಾಗದ್ದು ಬಹುಷಃ ಏನೂ ಇಲ್ಲ. ಹಲ್ಲಿನ ಆರೋಗ್ಯದಿಂದ ಹಿಡಿದು ದೇಹದ ಆರೋಗ್ಯದವರೆಗೆ ಎಲ್ಲಕ್ಕೂ ಅರಿಶಿನ ಮದ್ದು. ಪೀರಿಯಡ್ಸ್ ಸಮಸ್ಯೆಗೆ ಕೂಡಾ ಅರಿಶಿನ ಅತ್ಯುತ್ತಮ ಮದ್ದು.

ದಾಳಿಂಬೆ

ದಾಳಿಂಬೆ ಹಣ್ಣು ಮುಟ್ಟಿನ ಸಮಸ್ಯೆಗೆ ಅತ್ಯುತ್ತಮ ಮದ್ದು. ಯಾವಾಗ ಪೀರಿಯಡ್ಸ್ ಆಗಬೇಕೆಂದು ಬಯಸುತ್ತೀರೋ ಅದಕ್ಕಿಂತ 15 ದಿನ ಮುಂಚೆಯಿಂದ ಪ್ರತಿ ದಿನ ಮೂರು ಬಾರಿ ದಾಳಿಂಬೆ ಜ್ಯೂಸ್ ಕುಡಿಯಬೇಕು. ಆಗಾಗ ದಾಳಿಂಬೆ ಜ್ಯೂಸನ್ನು ಕಬ್ಬಿನ ಹಾಲಿನೊಂದಿಗೆ ಬೆರೆಸಿ ಕುಡಿಯುವುದು ಕೂಡಾ ಉತ್ತಮ ಫಲ ನೀಡುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿಯೇ ಮಾಡಿ ರುಚಿಯಾದ ಮೀನಿನ ಸಾರು