Select Your Language

Notifications

webdunia
webdunia
webdunia
Thursday, 24 April 2025
webdunia

ಮನೆಯಲ್ಲಿಯೇ ಮಾಡಿ ರುಚಿಯಾದ ಮೀನಿನ ಸಾರು

ಅಡುಗೆ
ಬೆಂಗಳೂರು , ಭಾನುವಾರ, 2 ಜನವರಿ 2022 (14:33 IST)
ಮೀನು ಎಂದಾಕ್ಷಣ ಎಲ್ಲರೂ ಕರಾವಳಿ ರೆಸ್ಟೋರೆಂಟ್ಗಳನ್ನು ಅಥವಾ ಅಲ್ಲಿನ ನಾನಾ ವಿಧದ ಮೀನುಗಳ ರಾಶಿಯನ್ನೋ ನೆನಪಿಸಿಕೊಳ್ಳುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ.
 
ಬೆಂಗಳೂರು ಮೈಸೂರು ಕಡೆಗೆ ಬಂದ ಕರಾವಳಿಗರಂತೂ ನಮ್ಮ ಕೆರೆ ಮತ್ತು ಹೊಳೆ ಮೀನುಗಳನ್ನು ಅಣಕಿಸುವುದು, ತಿನ್ನುವುದಿಲ್ಲವೆಂದು ಮೂಗು ಮುರಿಯುವುದು ಮಾಡುತ್ತಾರೆ.

ಇಲ್ಲಿನ ಮೀನುಗಳಲ್ಲಿ ಮಣ್ಣಿನ ವಾಸನೆ ಎನ್ನುತ್ತಾರೆ. ಆದರೆ ಬಯಲುಸೀಮಿಗರಿಗೆ ಇಂತಹ ವ್ಯತ್ಯಾಸವೇ ಇಲ್ಲ. ಸಮುದ್ರ ಹೊಳೆ ಕೆರೆ ಎಲ್ಲ ಕಡೆಯೂ ಬೆಳೆದ ನಾನಾ ರುಚಿಯ ಮೀನುಗಳನ್ನು ತಿನ್ನುವುದನ್ನು ರೂಢಿಮಾಡಿಕೊಂಡಿದ್ದಾರೆ.

ಇದೊಂದು ಭೌಗೋಳಿಕ ಭಿನ್ನತೆ ಅಷ್ಟೇ ಹಾಗೂ ನಮ್ಮ ಅಡುಗೆಯ ವಿಧಾನಗಳು ಕೂಡ ಪರಸ್ಪರ ವಿಭಿನ್ನವಾಗಿಯೇ ಇವೆ. ನಮ್ಮ ಹೊಳೆ ಮತ್ತು ಕೆರೆಗಳಲ್ಲಿ ಸಾಕಷ್ಟು ಮೀನು ದೊರೆತರೂ ಮೀನೂಟ ಅಷ್ಟು ಪ್ರಸಿದ್ಧವಲ್ಲ, ಆದರೆ ಒಂದು ವಿಶೇಷದ ಅಡುಗೆ.

ಬೇಕಾಗುವ ಪದಾರ್ಥಗಳು

ಮೀನು- 1 ಕೆಜಿ
* ಈರುಳ್ಳಿ-2
* ಟೊಮೆಟೊ-2
* ಅಡುಗೆ ಎಣ್ಣೆ-ಅರ್ಧ
* ದನಿಯಾ – ಅರ್ಧ ಕಪ್
* ಬ್ಯಾಡಗಿ ಮೆಣಸು- 5ರಿಂದ 8
* ತೆಂಗಿನಕಾಯಿ ತುರಿ- 1ಕಪ್
* ಹುಣಸೆಹಣ್ಣು- ಸ್ವಲ್ಪ
* ಬೆಳ್ಳುಳ್ಳಿ- 1
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ಕರಿಬೇವು- ಸ್ವಲ್ಪ
* ಜೀರಿಗೆ- 3 ಟೀ ಸ್ಪೂನ್
* ಕಾಳುಮೆಣಸು- 1 ಟೀ ಸ್ಪೂನ್
* ಅರಿಶಿಣ ಪುಡಿ- 1 ಟೀ ಸ್ಪೂನ್
* ಮೆಂತೆಕಾಳು- ಅರ್ಧ ಟೀ ಸ್ಪೂನ್
* ಇಂಗು- ಸ್ವಲ್ಪ
* ಸಾಸಿವೆ- ಸ್ವಲ್ಪ
* ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ

ಮತ್ತೊಂದು ಭಾನುವಾರ ಬಂದಿರುವುದರಿಂದ ಮನೆಯಲ್ಲಿ ಏನಾದರೂ ಮಾಂಸಾಹಾರದ ಅಡುಗೆ ಮಾಡಿದ್ದೇನೆ ಮಾಡಬೇಕು ಎಂದು ಎಷ್ಟೋ ಜನ ಅಂದುಕೊಂಡಿರುತ್ತಾರೆ ಹಾಗಾಗಿ ಈ ವಾರ ರುಚಿರುಚಿಯಾದ ಬಯಲುಸೀಮೆ ಶೈಲಿಯ ಮೀನಿನ ಸಾರು ಮಾಡಿಕೊಂಡು ಮನೆಯಲ್ಲಿ ಸೇವನೆ ಮಾಡಿ.

ಬಯಲುಸೀಮೆ ಶೈಲಿಯ ಮೀನಿನ ಸಾರು ಮನೆಯಲ್ಲಿ ಹೇಗೆ ಮಾಡುವುದು ಎನ್ನುವ ವಿಧಾನ ಇಲ್ಲಿದೆ. ಮೊದಲಿಗೆ ಒಂದು ಹುಣಸೆಹಣ್ಣನ್ನು ನೀರಿನೊಂದಿಗೆ ನೆನೆಸಿಟ್ಟಿರಬೇಕು. ಮತ್ತೊಂದು ಕಡೆ ಜೀರಿಗೆ, ದನಿಯಾಕಾಳು, ಮೆಂತೆಕಾಳು, ಬ್ಯಾಡಗಿಮೆಣಸು, ಕಾಳುಮೆಣಸುಗಳನ್ನು ಸೇರಿಸಿ ಚೆನ್ನಾಗಿ ಹುರಿದಿಟ್ಟುಕೊಳ್ಳಬೇಕು.

ಬಳಿಕ ಪ್ಯಾನ್ ಗೆ ಈರುಳ್ಳಿ, ಬೆಳ್ಳುಳ್ಳಿ, ಟೊಮ್ಯಾಟೊ, ಅಡುಗೆ ಎಣ್ಣೆಯನ್ನು ಹಾಕಿ ಫ್ರೈ ಮಾಡಿಕೊಳ್ಳಬೇಕು.ನಂತರ ಈ ಮೊದಲು ಹುರಿದಿಟ್ಟುಕೊಂಡ ಮಸಾಲೆ ಪದಾರ್ಥಗಳನ್ನು ಮಿಕ್ಸಿ ಜಾರ್ಗೆ ಸೇರಿಸಿಕೊಂಡು, ತೆಂಗಿನಕಾಯಿ, ಅರಿಶಿಣ, ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಬೇಕು.

ಬಳಿಕ ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಅದಕ್ಕೆ ಸಾಸಿವೆ, ಇಂಗು, ಒಣಮೆಣಸು, ಕರಿಬೇವು, ಹುಣಸೆಹಣ್ಣಿನ ನೀರು, ರುಬ್ಬಿಕೊಂಡಿರುವ ಮಸಾಲೆಯನ್ನು ಹಾಕಿ. ನಿಮಗೆ ಬೇಕಾದ ಪ್ರಮಾಣದಲ್ಲಿ ನೀರು ಮತ್ತು ರುಚಿಗೆ ತಕ್ಕಷ್ಟು ನೀರನ್ನು ಸೇರಿಸಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಸಾರು ಕುದಿಯುತ್ತಿದ್ದಂತೆ ಮೀನನ್ನು ಸೇರಿಸಿ ಚೆನ್ನಾಗಿ ಬೇಯಿಸಿದರೆ ರುಚಿಯಾದ ಮೀನಿನ ಸಾರು ಸವಿಯಲು ಸಿದ್ಧವಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಿಹಿ ಗೆಣಸಿನಲ್ಲಿ ಎಷ್ಟೆಲ್ಲಾ ಆರೋಗ್ಯ ಅಡಗಿದೆ