Select Your Language

Notifications

webdunia
webdunia
webdunia
webdunia

ಪ್ರತ್ಯೇಕ ರಾಜ್ಯ ಕೇಳುವವರಿಗೆ ತಿಳುವಳಿಕೆ ಇಲ್ಲ ಎಂದ ಸಚಿವ

ಪ್ರತ್ಯೇಕ ರಾಜ್ಯ ಕೇಳುವವರಿಗೆ ತಿಳುವಳಿಕೆ ಇಲ್ಲ ಎಂದ ಸಚಿವ
ರಾಯಚೂರು , ಶನಿವಾರ, 28 ಜುಲೈ 2018 (17:15 IST)
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹ ಮಾಡುತ್ತಿರುವವರಿಗೆ ತಿಳುವಳಿಕೆಯಿಲ್ಲ ಎಂದು ಪಶುಸಂಗೋಪನೆ ಇಲಾಖೆ ಸಚಿವ ಹೇಳಿದ್ದಾರೆ.

ಅಖಂಡ ಕರ್ನಾಟಕ ಇರಬೇಕು ಎನ್ನುವುದು ನಮ್ಮ ವಾದ. ತಿಳುವಳಿಕೆ ಇಲ್ಲದವರು ಪ್ರತ್ಯೇಕ ರಾಜ್ಯಕ್ಕೆ ಆಗ್ರಹ ಮಾಡುತ್ತಿದ್ದಾರೆ ಎಂದು ಪಶುಸಂಗೋಪನೆ ಇಲಾಖೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.

ರಾಜ್ಯ ಸರ್ಕಾರವು ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿಲ್ಲ. ಹಾಗೇ ಅನ್ಯಾಯ ಮಾಡಿದ್ದೇ ಆದಲ್ಲಿ ಬೆಳಗಾವಿಯಲ್ಲಿ ಸುವರ್ಣ ಸೌಧದಲ್ಲಿ ಮೊದಲ ಅಧಿವೇಶನ ಕರೆದಿದ್ದು ಯಾರು? ಸುವರ್ಣ ಸೌಧ ಶಂಕು ಸ್ಥಾಪನೆ ಮಾಡಿರುವುದು ಯಾರು? ಇವೆಲ್ಲಾ ನಮ್ಮ ಜೆಡಿಎಸ್ ಸರ್ಕಾರದ ಅವಧಿಯಲ್ಲಿಯೇ ನಡೆದ ಕೆಲಸಗಳಲ್ಲವೇ ಎಂದು ಪ್ರಶ್ನಿಸಿದ್ದಾರೆ.  

ಇನ್ನು ರೈತರ ಸಾಲಮನ್ನಾ ವಿಚಾರದಲ್ಲಿ ಸರ್ಕಾರ ರೈತರ ಸಾಲಮನ್ನಾ ವಿಚಾರಕ್ಕೆ ಬದ್ಧವಿದ್ದು, ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ನೀಡಿದಂತೆ ಈಡೇರಿಸಿದ್ದೇವೆ. ನಮ್ಮ ಪ್ರಣಾಳಿಕೆ ಒಂದು ವರ್ಷಕ್ಕೆ ಸಿಮೀತವಿಲ್ಲ ಐದು ವರ್ಷದ ಪ್ರಣಾಳಿಕೆ ಎಂದರು

ಬಿಜೆಪಿಗೆ ರೈತರ ಸಾಲಮನ್ನಾ ವಿಚಾರ ಬಗ್ಗೆ ಮಾತನಾಡುವುದಕ್ಕೆ ನೈತಿಕತೆ ಇಲ್ಲ. ಯಾಕೆಂದರೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ್ರೆ ಸ್ವಾಮಿನಾಥನ್ ವರದಿಯನ್ನ ಜಾರಿಗೆ ತರುವುದಾಗಿ ಹೇಳಿದ್ರು. ಆದ್ರೂ ಈಡೇರಿಸಿಲ್ಲ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 




Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರ ಕರ್ನಾಟಕಕ್ಕೆ ಅನ್ಯಾಯ: ಜನಪ್ರತಿನಿಧಿಗಳೇ ಕಾರಣ ಎಂದ ಹೊರಟ್ಟಿ