Select Your Language

Notifications

webdunia
webdunia
webdunia
webdunia

ಉತ್ತರ ಕರ್ನಾಟಕಕ್ಕೆ ಅನ್ಯಾಯ: ಜನಪ್ರತಿನಿಧಿಗಳೇ ಕಾರಣ ಎಂದ ಹೊರಟ್ಟಿ

ಉತ್ತರ ಕರ್ನಾಟಕಕ್ಕೆ ಅನ್ಯಾಯ: ಜನಪ್ರತಿನಿಧಿಗಳೇ ಕಾರಣ ಎಂದ ಹೊರಟ್ಟಿ
ಬೆಂಗಳೂರು , ಶನಿವಾರ, 28 ಜುಲೈ 2018 (17:11 IST)
ನಂಜುಂಡಪ್ಪ ವರದಿ ಬಂದ ನಂತರ ಸಾಕಷ್ಟು ಜನ ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ ಆಗಿದ್ದಾರೆ. ಆವಾಗ ಏಕೆ ಅಭಿವೃದ್ಧಿ ಮಾಡಲಿಲ್ಲ...? ಎಂದು ವಿಧಾನ ಪರಿಷತ್ ಸಭಾಪತಿಬಸವರಾಜ ಹೊರಟ್ಟಿ ಪ್ರಶ್ನಿಸಿದ್ದಾರೆ.  

ನಮ್ಮ ನಿಲುವು ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬಾರದು. ಅಖಂಡ ಕರ್ನಾಟಕ ಆಗಿರಬೇಕು. ಪ್ರತ್ಯೇಕ ರಾಜ್ಯ ಎನ್ನುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ಸಭಾಪತಿಬಸವರಾಜ ಹೊರಟ್ಟಿ  ವ್ಯಕ್ತಪಡಿಸಿದ್ದಾರೆ.

ಸಿಎಂ ಕುಮಾರಸ್ವಾಮಿಯವರೇ ಉತ್ತರ ಕರ್ನಾಟಕದ ಒಂದು ಜಿಲ್ಲೆಯಲ್ಲಿಸಭೆ ಕರೆಯಲು ನಿರ್ಧಾರ ಮಾಡಿದ್ದಾರೆ.
ನಾನು ಮುಖ್ಯಮಂತ್ರಿಗಳ ಮಾತನಾಡಿದ್ದೇನೆ. ಎಲ್ಲಾ ಹೋರಾಟಗಾರರನ್ನ ಮತ್ತು ಮಾಠಾಧೀಶರನ್ನ ಸಭೆಗೆ ಕರೆಯುತ್ತೇನೆ ಎಂದಿದ್ದಾರೆ. ಸಭೆಗೆ ಎಲ್ಲಾ ಮಾಹಿತಿಗಳನ್ನ ತರಲಿ, ಉತ್ತರ ಕರ್ನಾಟಕಕ್ಕೆ ಏನಾದರೂ ನಾನು ಅನ್ಯಾಯ ಮಾಡಿದ್ದರೆ, ಅದನ್ನ ತಕ್ಷಣ ಸರಿ ಪಡಿಸಿಕೊಳ್ಳುತ್ತೇನೆ ಎಂದಿದ್ದಾರೆ. ಬಜೆಟ್ನಲ್ಲಿ ಸ್ವಲ್ಪ ಹೆಚ್ಚು ಕಡೆಮೆ ಆಗಿರಬೇಕು.

ಹೋರಾಟ ಮಾಡುವವರು ಮತ್ತು ಸ್ವಾಮೀಜಿಗಳೇ ಸಮಯ ಹಾಗೂ ಸ್ಥಳ ನಿಗದಿ ಮಾಡಲಿ. ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ, ಅವರ ಜೊತೆ ಇವರು ಚರ್ಚಿಸಲಿ. ಚರ್ಚೆ ನಂತರ ನಮಗೆ ಅನ್ಯಾಯವಾದ್ರೆ, ಅನ್ಯಾಯವನ್ನ ಹೇಗೆ ಸರಿಪಡಿಸಬೇಕು ಮತ್ತು ನಮಗೆ ಬರುವಂತ ಯೋಜನೆಗಳನ್ನ ನಮಗೆ ಬರುವಂತೆ ಒತ್ತಾಯ ಮಾಡಬೇಕು ಎಂದರು.
ಅದನ್ನ ಬಿಟ್ಟು ಪ್ರತ್ಯೇಕ ರಾಜ್ಯ ಮಾಡುವುದರಿಂದ ಯಾವ ಪುರುಷಾರ್ಥವನ್ನ ಸಾಧಿಸುವುದಿಲ್ಲ. ಇದರಿಂದ ಏನೂ ಉಪಯೋಗವಿಲ್ಲ ಎಂದು ಹೊರಟ್ಟಿ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿದ್ರೆ ಬಾರುಕೋಲಿನಿಂದ ಬುದ್ಧಿ ಕಲಿಸುವೆ ಎಂದವರಾರು?