Publish Date: Sat, 28 Jul 2018 (11:49 IST)
Updated Date: Sat, 28 Jul 2018 (11:50 IST)
ಬೆಂಗಳೂರು: ಉತ್ತರ ಕರ್ನಾಟಕ ನಿರ್ಲಕ್ಷ್ಯಗೊಳಗಾಗಿದೆ ಎಂದು ಆಪಾದಿಸಿ ಪ್ರತ್ಯೇಕ ರಾಜ್ಯಕ್ಕಾಗಿ ಎದ್ದಿರುವ ಹೋರಾಟಕ್ಕೆ ನಮ್ಮ ಬೆಂಬಲವಿಲ್ಲ ಎಂದು ಹೈದರಾಬಾದ್ ಕರ್ನಾಟಕ ಹೋರಾಟಗಾರರು ಸ್ಪಷ್ಟಪಸಿದ್ದಾರೆ.
ಆಗಸ್ಟ್ 2 ರಂದು ಇದೇ ಕಾರಣಕ್ಕೆ ರಾಜ್ಯ ಬಂದ್ ಗೆ ಕರೆ ನೀಡಲಾಗಿದೆ. ಆದರೆ ಈ ಬಂದ್ ನಮ್ಮ ಬೆಂಬಲವಿಲ್ಲ ಎಂದು ಹೈದರಾಬಾದ್ ಕರ್ನಾಟಕ ಹೋರಾಟಗಾರರು ಹೇಳಿದ್ದಾರೆ.
ನಮ್ಮ ಸೌಲಭ್ಯಗಳನ್ನು ಮುಂಬೈ-ಕರ್ನಾಟಕ ಮಂದಿ ಕಸಿದುಕೊಳ್ಳುತ್ತಿದ್ದಾರೆ. ನಮ್ಮ ಹೋರಾಟಗಳಿಗೆ ಅವರ ಬೆಂಬಲವಿಲ್ಲ. ಬೇಕಿದ್ದರೆ ಅವರಿಗೆ ವಿಶೇಷ ಸ್ಥಾನಮಾನದಡಿ ನೆರವು ನೀಡಲಿ. ಆದರೆ ಪ್ರತ್ಯೇಕ ರಾಜ್ಯ ಹೋರಾಟವನ್ನು ನಾವು ಬೆಂಬಲಿಸಲ್ಲ ಎಂದು ಹೋರಾಟಗಾರರು, ವಿವಿಧ ಪ್ರಗತಿಪರ ಸಂಘಟನೆಗಳು ಹೇಳಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.