ಸಚಿವ ಹೆಚ್.ಡಿ.ರೇವಣ್ಣ ನಡೆ ಬಗ್ಗೆ ಕಾಂಗ್ರೆಸ್ ಶಾಸಕರೊಬ್ಬರು ರೋಸಿಹೋಗಿದ್ದಾರೆ. ಹೀಗಾಗಿ ರೇವಣ್ಣ ಅವರ ಕ್ರಮದ ವಿರುದ್ಧ ಸಿಎಂಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಸಚಿವ ಹೆಚ್. ಡಿ. ರೇವಣ್ಣ ಕೋಲಾರ- ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳ ರೈತರಿಗೆ ಗಾಯದ ಮೇಲೆ ಬರೆ ಎಳೆಯಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಆಪಾದಿಸಿದ್ದಾರೆ. ಚಿಕ್ಕಬಳ್ಳಾಪುರ ದಲ್ಲಿ ಕಾಂಗ್ರೆಸ್ ಶಾಸಕ ಡಾ. ಕೆ. ಸುಧಾಕರ್ ಹೇಳಿಕೆ ನೀಡಿದ್ದು, ಕೋಚಿಮುಲ್ ಪ್ರತಿದಿನ 80 ಲಕ್ಷ ಲೀಟರ್ ರಕ್ಷಾಣಾ ಇಲಾಖೆಗೆ ಕಳುಹಿಸಲಾಗುತ್ತಿದೆ.
ಆದ್ರೆ ಈಗ ರೇವಣ್ಣ 40 ಲಕ್ಷ ಲೀಟರ್ ಖಡಿತ ಮಾಡಿ ಹಾಸನದಿಂದ ಕಳುಹಿಸಲು ಚಿಂತನೆ ಮಾಡಿದ್ದಾರೆ. ಹೀಗಾಗಿ ಕಡಿತ ಮಾಡಿರುವ ಕ್ರಮಕ್ಕೆ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಎರಡು ಜಿಲ್ಲೆಗಳ ಸಂಸದರು, ಶಾಸಕರು ಎಚ್ಚೆತ್ತುಕೊಳಬೇಕಿದೆ. ನಾನು ಕೂಡ ಈ ಬಗ್ಗೆ ಸಿಎಂ ಗೆ ಪತ್ರ ಬರೆಯುತ್ತೇನೆ ಎಂದು ಶಾಸಕ ಡಾ.ಕೆ. ಸುಧಾಕರ ಹೇಳಿದ್ದಾರೆ.