Publish Date: Wed, 25 Jul 2018 (17:51 IST)
Updated Date: Wed, 25 Jul 2018 (17:54 IST)
ಕೆಸರು ಗದ್ದೆಯಾದ ಗ್ರಾಮದ ರಸ್ತೆ… ಹದಗೆಡುತ್ತಿರುವ ಸಂಚಾರ… ಇದರಿಂದ ರೋಸಿ ಹೋದ ಗ್ರಾಮಸ್ಥರು ರಸ್ತೆಯಲ್ಲಿಯೇ ನಾಟಿ ಮಾಡಿ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಹಳ್ಳಕೊಳ್ಳಗಳಿಂದ ಕೂಡಿದ ಗ್ರಾಮದ ರಸ್ತೆಯಿಂದ ರೋಸಿಹೋದ ಗ್ರಾಮಸ್ಥರಿಂದ ರಸ್ತೆಯಲ್ಲೇ ನಾಟಿ ಮಾಡಿ ವಿನೂತನ ಪ್ರತಿಭಟನೆ ನಡೆದಿದೆ. ರಸ್ತೆ ಮಧ್ಯದಲ್ಲೇ ಶಾಮಿಯಾನ ಹಾಕಿ ಅಡುಗೆ ತಯಾರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನ ನಾಗನಹಳ್ಳಿಯ ಹೆಗ್ಗಡಪುರದ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ರಸ್ತೆ ಹಾಳಾಗಿ ಗುಂಡಿ ಬಿದ್ದಿರು ಲೆಕ್ಕಿಸದ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ವಿರುದ್ಧ ಅಲ್ಲಿನ ಜನ ಗರಂ ಆದರು. ರಸ್ತೆಯೇ ಕೆರೆಯಂತಾಗಿ ಕೆಸರು ತುಂಬಿ ಹೋಗಿತ್ತು. ಕಳೆದ 25 ವರ್ಷಗಳಿಂದಲೂ ಇದೇ ರೀತಿ ಇದ್ದ ರಸ್ತೆ ಅವಸ್ಥೆಯಿಂದ ರೊಚ್ಚಿಗೆದ್ದ ಜನರು ರಸ್ತೆಯಲ್ಲಿ ನಾಟಿ ಮಾಡಿದರು, ಅಲ್ಲದೇ ರಸ್ತೆ ಮಧ್ಯೆ ಪೆಂಡಾಲ್ ಹಾಕಿ ಧಿಕ್ಕಾರವನ್ನು ಗ್ರಾಮಸ್ಥರು ಕೂಗಿದ್ದಾರೆ. ರಸ್ತೆ ದುರಸ್ತಿಗೊಳಿಸುವಂತೆ ವಿನೂತನವಾಗಿ ಒತ್ತಾಯಿಸಿದರು.