ಬೆಂಗಳೂರು : ಪ್ರಾದೇಶಿಕ ಸೆನ್ಸಾರ್ ಮಂಡಳಿಯ ವಿರುದ್ಧ ಕನ್ನಡ ಚಿತ್ರರಂಗದ ಹಲವಾರು ನಿರ್ಮಾಪಕರು, ನಿರ್ದೇಶಕರು ಇಂದು 10ಗಂಟೆಗೆ ಫಿಲಂ ಚೇಂಬರ್ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಇತ್ತೀಚೆಗೆ ಸೆನ್ಸಾರ್ ಮಂಡಳಿ ನಿಗದಿತ ವೇಳೆಗೆ ಸಿನಿಮಾಗಳನ್ನ ಸೆನ್ಸಾರ್ ಮಾಡುತ್ತಿಲ್ಲ. ಜೊತೆಗೆ ಎಲ್ಲಾ ಸಿನಿಮಾಗಳಿಗೂ ಎ ಸರ್ಟಿಫಿಕೇಟ್ ಕೊಡ್ತಿದ್ದಾರೆ. ಹಾಗೇ ನಿರ್ಮಾಪಕ, ನಿರ್ದೇಶಕರನ್ನ ಅಗೌರವದಿಂದ ಕಾಣ್ತಿದೆ ಎಂದು ಸೆನ್ಸಾರ್ ಮಂಡಳಿಯ ವಿರುದ್ಧ ಕನ್ನಡ ಚಿತ್ರರಂಗದ ಹಲವಾರು ನಿರ್ಮಾಪಕರು, ನಿರ್ದೇಶಕರು ಗರಂ ಆಗಿದ್ದಾರೆ.
ಆದಕಾರಣ 25ನೇ ತಾರೀಖು ಬೆಳಗ್ಗೆ 10ಗಂಟೆಗೆ ಫಿಲಂ ಚೇಂಬರ್ ಎದುರು ಸೆನ್ಸಾರ್ ಬೋರ್ಡ್ ವಿರುದ್ಧ ಪ್ರತಿಭಟನೆ ಮಾಡುವುದಾಗಿ ನಿರ್ಮಾಪಕರ ವಲಯ ಮತ್ತು ನಿರ್ದೇಶಕರ ವಲಯಕ್ಕೆ ನೊಂದ ನಿರ್ಮಾಪಕರು, ನಿರ್ದೇಶಕರುಗಳು ಸುತ್ತೋಲೆಯನ್ನು ಕಳುಹಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ