Select Your Language

Notifications

webdunia
webdunia
webdunia
webdunia

ಆರೋಗ್ಯಕ್ಕೆ ಉತ್ತಮವಾದ ನೀರನ್ನು ಈ ವೇಳೆ ಕುಡಿದರೆ ಆರೋಗ್ಯಕ್ಕೆ ಹಾನಿಯಾಗುವುದಂತೆ

ಆರೋಗ್ಯಕ್ಕೆ ಉತ್ತಮವಾದ ನೀರನ್ನು ಈ ವೇಳೆ ಕುಡಿದರೆ ಆರೋಗ್ಯಕ್ಕೆ ಹಾನಿಯಾಗುವುದಂತೆ
ಬೆಂಗಳೂರು , ಮಂಗಳವಾರ, 24 ಜುಲೈ 2018 (09:49 IST)
ಬೆಂಗಳೂರು : ನೀರು ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಕೆಲವು ಸಂದರ್ಭಗಳಲ್ಲಿ ನೀರು ಕುಡಿಯಬಾರದು. ಕುಡಿದರೆ ಆರೋಗ್ಯಕ್ಕೆ ಹಾನಿಯಾಗುತ್ತದೆ. ಆ ಸಂದರ್ಭಗಳು ಯಾವುದು ಎಂಬುದು ಇಲ್ಲಿದೆ ನೋಡಿ.


*ಓಡಿ ಬಂದು ನೀರು ಕುಡೀಬೇಡಿ :
ಕೆಲವೊಮ್ಮೆ ಅತಿಯಾದ ದಾಹವನ್ನು ತಣಿಸಲು ಕೆಲವರು ಓಡಿ ಏದುಸಿರು ಬಿಡುತ್ತಿರುವಾಗಲೇ ಗುಟುಕು ನೀರು ಕುಡಿಯುತ್ತಾರೆ. ಇದರಿಂದ ಬಹಳ ಸಮಸ್ಯೆಯಾಗಬಹುದು. ಓಡಿ ಏದುಸಿರು ಬರುತ್ತಿರುವಾಗ, ಮೆಟ್ಟಿಲು ಹತ್ತಿಳಿಯುವ ಸಂದರ್ಭ ನೀರು ಕುಡಿಯಬೇಡಿ. ನಿಮ್ಮ ಏದುಸಿರು ತಹಬಂದಿಗೆ ಬಂದ ಬಳಿಕ ನೀರು ಕುಡಿಯಿರಿ.


*ದಾಹ ಇಂಗಿದ ಮೇಲೂ ನೀರು ಕುಡಿಯೋದು ಒಳ್ಳೆಯದಲ್ಲ :
ಬಾಯಾರಿಕೆ ನಿಂತ ಮೇಲೂ ಆರೋಗ್ಯದ ಕಾರಣಕ್ಕೆ ನೀರು ಕುಡಿಯುವವರು ಕೆಲವರಿದ್ದಾರೆ. ಇದರಿಂದ ದೇಹದಲ್ಲಿರುವ ಸಹಜ ಉಪ್ಪಿನಂಶ ದುರ್ಬಲವಾಗುತ್ತೆ. ದೇಹದಲ್ಲಿರುವ ಸೋಡಿಯಂ ಪ್ರಮಾಣದಲ್ಲೂ ಗಣನೀಯ ಇಳಿಕೆಯಾಗಿ ಹೈಪೊನೇಟ್ರೀಮಿಯಾಗೆ ತುತ್ತಾಗಬಹುದು. ಇದರಿಂದ ವಾಕರಿಕೆ, ವಾಂತಿ, ಆರೋಗ್ಯ ತೀರಾ ಹದಗೆಟ್ಟು ಸಾವೂ ಸಂಭವಿಸಬಹುದು. ಆದರೆ ಹೀಗಾಗುವುದು ಅತೀ ವಿರಳ.


*ಪಚನಕ್ರಿಯೆ ಸರಾಗವಿದ್ದೂ ಹೆಚ್ಚೆಚ್ಚು ನೀರು ಕುಡಿಯಬೇಡಿ :
ಮಲಬದ್ದತೆಯಂಥ ಸಮಸ್ಯೆಗಳಿಲ್ಲದೇ ಪಚನಕ್ರಿಯೆ ಸರಾಗವಾಗಿದ್ದರೆ ನೀವು ಸೇವಿಸುತ್ತಿರುವ ನೀರು ಸಾಕಾಗುವಷ್ಟಿದೆ ಅಂತರ್ಥ. ಆಮೇಲೂ ನೀರು ಕುಡಿಯೋದು ಬೇಡ. ಹಾಗೇ ಮೂತ್ರ ನೀರಿನಂತೆ ವರ್ಣರಹಿತವಾಗಿದ್ದರೆ ನೀವು ತೆಗೆದುಕೊಳ್ಳುತ್ತಿರುವ ನೀರನ್ನು ಇನ್ನು ಸ್ವಲ್ಪ ಕಡಿಮೆಮಾಡಬೇಕು. ನಸು ಹಳದಿ ಬಣ್ಣದಲ್ಲಿದ್ದರೆ ಸರಿಯಾಗಿದೆ ಅಂತರ್ಥ. ಹಳದಿ ಬಣ್ಣ ಹೆಚ್ಚಿದ್ದರೆ ನೀರಿನ ಸೇವನೆ ಹೆಚ್ಚು ಮಾಡಬೇಕು.


*ವರ್ಕೌಟ್ ಮಾಡಿದ ಕೂಡಲೇ ನೀರು ಬೇಡಿ :
ಹೆಚ್ಚಿನವರು ವರ್ಕೌಟ್ ಮಾಡುವ ಮಧ್ಯದಲ್ಲಿ ಅಥವಾ ವರ್ಕೌಟ್ ನಿಲ್ಲಿಸಿದ ಕೂಡಲೇ ನೀರು ಕುಡಿಯುತ್ತಾರೆ. ತಜ್ಞರ ಪ್ರಕಾರ ವರ್ಕೌಟ್ ಮುಗಿಸಿದ ಸ್ವಲ್ಪ ಹೊತ್ತಿನ ಬಳಿಕ ನೀರಿನ ಬದಲು ಎಳನೀರು ಕುಡಿಯೋದು ಒಳ್ಳೆಯದು. ವರ್ಕೌಟ್ ನಿಲ್ಲಿಸಿದ ಕೂಡಲೇ ನೀರು ಕುಡಿಯೋದು ಒಳ್ಳೆಯದಲ್ಲವಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 
 

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಕ್ರಿಯೆಯ ತಕ್ಷಣ ಪುರುಷರು ನಿದ್ರೆಗೆ ಜಾರಲು ಕಾರಣ ಬಯಲು