Select Your Language

Notifications

webdunia
webdunia
webdunia
webdunia

ಐಸ್ ಕ್ಯೂಬ್‌ಗಳಿಂದ ಇಷ್ಟೆಲ್ಲಾ ಉಪಯೋಗಗಳಿವೆಯಂತೆ..!!

ಐಸ್ ಕ್ಯೂಬ್‌ಗಳಿಂದ ಇಷ್ಟೆಲ್ಲಾ ಉಪಯೋಗಗಳಿವೆಯಂತೆ..!!
ಬೆಂಗಳೂರು , ಸೋಮವಾರ, 23 ಜುಲೈ 2018 (18:38 IST)
ಐಸ್ ಕ್ಯೂಬ್‌ ಬಳಸುವುದರಿಂದ ನಿಮ್ಮ ಮುಖದ ತ್ವಚೆಯು ಕಾಂತಿಯುಕ್ತವಾಗುತ್ತದೆ, ನಯವಾಗುತ್ತದೆ ಮತ್ತು ತಂಪಾಗಿರುತ್ತದೆ. ಇದು ನಿಮ್ಮ ಮೊಡವೆಗಳ ಸಮಸ್ಯೆಗೆ, ಉಗುರು ಬಣ್ಣವನ್ನು ಆರಿಸಲು ಮತ್ತು ಹಲವು ರೀತಿಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಈ ಸುಲಭವಾದ ಸಲಹೆಗಳನ್ನು ಉಪಯೋಗಿಸಿ ಅದ್ಭುತವಾದ ಫಲಿತಾಂಶಗಳನ್ನು ಪಡೆದುಕೊಳ್ಳಿ.
*ಮೊಡವೆಯನ್ನು ಕುಗ್ಗಿಸುತ್ತದೆ - ಐಸ್ ಅನ್ನು ನಿಮ್ಮ ಮೊಡವೆಯ ಮೇಲೆ ಸ್ವಲ್ಪ ಸಮಯ ಉಜ್ಜಿದರೆ ಅದು ನಿಮ್ಮ ಮೊಡವೆಯನ್ನು ಕುಗ್ಗಿಸುತ್ತದೆ.
 
*ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ - ಪ್ರತಿದಿನ ಬೆಳಿಗ್ಗೆ ಐಸ್ ನೀರಿನಲ್ಲಿ ನಿಮ್ಮ ಮುಖವನ್ನು ಮುಳುಗಿಸಿ. ಇದು ನಿಮ್ಮ ರಕ್ತಪರಿಚಲನೆಯನ್ನು ಹೆಚ್ಚಿಸುವುದರೊಂದಿಗೆ ಮುಖದ ಚರ್ಮವನ್ನು ಬಿಗಿಯಾಗಿಸುತ್ತದೆ.
 
*ಫಫಿ ಕಣ್ಣುಗಳ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ - ಸುಮಾರು 10 ನಿಮಿಷಗಳವರೆಗೆ ಐಸ್ ಅನ್ನು ನಿಮ್ಮ ಕಣ್ಣುಗಳ ಮೇಲೆ ಇಟ್ಟುಕೊಂಡರೆ ಫಫಿ ಕಣ್ಣಿನ ಸಮಸ್ಯೆ ಕಡಿಮೆಯಾಗುತ್ತದೆ.
 
*ಮುಖವನ್ನು ತಕ್ಷಣವೇ ಕಾಂತಿಯುಕ್ತವಾಗಿಸುತ್ತದೆ - ಸ್ನಾನದ ನಂತರ ಮಂಜುಗಡ್ಡೆಯಿಂದ ನಿಮ್ಮ ಮುಖವನ್ನು ಉಜ್ಜಬೇಕು. ಇದು ಮುಖದಲ್ಲಿರುವ ರಂಧ್ರಗಳನ್ನು ಕುಗ್ಗಿಸಿ ನಿಮ್ಮ ಮುಖವು ಹೊಳೆಯುವಂತೆ ಮಾಡುತ್ತದೆ.
 
*ನೋವನ್ನು ಕಡಿಮೆ ಮಾಡುತ್ತದೆ - ಐಬ್ರೋ ಮಾಡಿಕೊಳ್ಳುವಾಗ ಆ ಭಾಗದಲ್ಲಿ ಮಂಜುಗಡ್ಡೆಯಿಂದ ಉಜ್ಜಿಕೊಂಡರೆ ನೋವು ತಿಳಿಯುವುದಿಲ್ಲ.
 
*ಮುಖಕ್ಕೆ ಮೇಕಪ್ ಮಾಡಿಕೊಳ್ಳುವ ಮೊದಲು ಮಂಜುಗಡ್ಡೆಯಿಂದ ಮಸಾಜ್ ಮಾಡಿಕೊಂಡರೆ ಅದು ರಂಧ್ರಗಳನ್ನು ಬಿಗಿಯಾಗಿಸಿ ತ್ವಚೆಯನ್ನು ಮೃದುವಾಗಿಸುತ್ತದೆ.
 
*ಉಗುರಿಗೆ ಹಚ್ಚಿದ ಬಣ್ಣವನ್ನು ಬಹುಬೇಗ ಆರಿಸಿಕೊಳ್ಳಬಹುದು - ಉಗುರಿಗೆ ಬಣ್ಣವನ್ನು ಹಚ್ಚಿಕೊಂಡ ನಂತರ ಬೆರಳುಗಳನ್ನು ಐಸ್ ನೀರಿನಲ್ಲಿ ಅದ್ದಿ ನಂತರ ಗಾಳಿಯಲ್ಲಿ ಆರಿಸಿದರೆ ಬಹು ಬೇಗ ಆರುತ್ತದೆ.
 
*ಒಂದು ಬೌಲ್‌ನಲ್ಲಿ ಸೌತೆಕಾಯಿ ರಸ, ನಿಂಬೆ ರಸ ಮತ್ತು ಜೇನನ್ನು ಮಿಶ್ರಣ ಮಾಡಿ ಅದನ್ನು ಫ್ರೀಜ್ ಮಾಡಿ. ನಂತರ ಅದರಿಂದ ನಿಮ್ಮ ಮುಖ ಮತ್ತು ಕತ್ತಿನ ಭಾಗಕ್ಕೆ ಚೆನ್ನಾಗಿ ಉಚ್ಚಿ ಮಸಾಜ್ ಮಾಡಿಕೊಳ್ಳಿ. ಇದು ನಿಮ್ಮ ಮುಖವನ್ನು ಸ್ವಚ್ಛವಾಗಿಸುವುದರೊಂದಿಗೆ ಕಾಂತಿಯುಕ್ತವಾಗಿಸುತ್ತದೆ.
 
*ಮಂಜುಗಡ್ಡೆಯಿಂದ ನಿಮ್ಮ ಬೆನ್ನಿನ ಭಾಗದಲ್ಲಿ ವೃತ್ತಾಕಾರವಾಗಿ ಉಜ್ಜಿ ಮಸಾಜ್ ಮಾಡಿಸಿಕೊಳ್ಳುವುದರಿಂದ ಸ್ನಾಯುಗಳ ಒತ್ತಡ ಶಮನವಾಗುತ್ತದೆ ಮತ್ತು ಮಲಗುವ ಮೊದಲು ಆರಾಮವಾಗಿರುತ್ತದೆ.
 
ಕೇವಲ ಮಂಜುಗಡ್ಡೆಯನ್ನು ಬಳಸಿ ನೀವು ಇಷ್ಟೆಲ್ಲಾ ಲಾಭಗಳನ್ನು ಪಡೆಯಬಹುದಾದರೆ ಒಮ್ಮೆ ಪ್ರಯತ್ನಿಸಬಹುದಲ್ಲವೇ..

Share this Story:

Follow Webdunia kannada

ಮುಂದಿನ ಸುದ್ದಿ

ನಿಂಬೆಯ ಪ್ರಯೋಜನಗಳು ನಿಮಗೆ ತಿಳಿದಿದೆಯೇ?