Select Your Language

Notifications

webdunia
webdunia
webdunia
webdunia

ವ್ಯಾಕ್ಸ್ ಮಾಡಿದ ನಂತರ ಆಗುವ ಅಲರ್ಜಿಯನ್ನು ನಿವಾರಿಸಲು ಈ ವಿಧಾನ ಅನುಸರಿಸಿ

ವ್ಯಾಕ್ಸ್ ಮಾಡಿದ ನಂತರ ಆಗುವ ಅಲರ್ಜಿಯನ್ನು ನಿವಾರಿಸಲು ಈ ವಿಧಾನ ಅನುಸರಿಸಿ
ಬೆಂಗಳೂರು , ಗುರುವಾರ, 8 ಫೆಬ್ರವರಿ 2018 (07:46 IST)
ಬೆಂಗಳೂರು : ವ್ಯಾಕ್ಸಿಂಗ್‌ ಎಂದರೆ ದೇಹದಲ್ಲಿರುವ ಬೇಡವಾದ ಕೂದಲನ್ನು ನಿವಾರಣೆ ಮಾಡಿ ದೇಹವನ್ನು ಸ್ಮೂತ್‌ ಹಾಗೂ ಸುಂದರವಾಗಿ ಕಾಣುವಂತೆ ಮಾಡುತ್ತದೆ. ಆದರೆ ಕೆಲವೊಮ್ಮೆ ನೀವು ಬಳಸಿದ ವ್ಯಾಕ್ಸಿಂಗ್‌ ಕ್ರೀಂ ನಿಮಗೆ ಅಲರ್ಜಿ ಉಂಟು ಮಾಡಿ ರಾಶಸ್‌ ಅಥವಾ ಗುಳ್ಳೆ ತುರಿಕೆಗಳಾಗಬಹುದು. ಅದನ್ನು ನಿವಾರಿಸಲು ಈ ವಿಧಾನಗಳನ್ನು ಅನುಸರಿಸಿ.

*ಕೂಲ್‌ ವಾಟರ್‌ ಅಥವಾ ಐಸ್‌ ಕ್ಯೂಬ್‌ ಸ್ಕಿನ್‌ ಇರಿಟೇಶನ್‌ ಆಗುವುದರಿಂದ ತ್ವಚೆಯನ್ನು ರಕ್ಷಿಸುತ್ತದೆ. ಒಂದು ಬಟ್ಟೆಯನ್ನು ಕೋಲ್ಡ್‌ ನೀರಿನಲ್ಲಿ ಅದ್ದಿ ವ್ಯಾಕ್ಸ್‌ ಮಾಡಿದ ಜಾಗದ ಮೇಲೆ ಉಜ್ಜಿ. ಇಲ್ಲವಾದರೆ ಐಸ್‌ ಕ್ಯೂಬ್‌ ಸಹಾಯದಿಂದ ಮಸಾಜ್‌ ಮಾಡಿ.

*ಅಲೋವೆರಾ ಜೆಲ್‌ ಸ್ಕಿನ್‌ ಇನ್‌ಫೆಕ್ಷನ್‌ ಮತ್ತು ಉರಿಯಿಂದ ಮುಕ್ತಿ ನೀಡುವುದರ ಜೊತೆಗೆ ತ್ವಚೆಯನ್ನು ಹೈಡ್ರೈಟ್‌ ಆಗಿರಲು ಸಹಾಯ ಮಾಡುತ್ತದೆ. ಅಲೋವೆರಾ ಜೆಲ್‌ ತೆಗೆದು ಸ್ಕಿನ್‌ ಮೇಲೆ ಹಚ್ಚಿ ಇದರಿಂದ ನೋವು ನಿವಾರಣೆಯಾಗುತ್ತದೆ.

*ವಿಟಾಮಿನ್‌ ಈ ಅಥವಾ ಟೀ ಟ್ರೀ ಆಯಿಲ್‌  ಇವೆರಡು ಸಹ ರಾಶಸ್‌ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ವಿಟಾಮಿನ್‌ ಈ ಅಥವಾ ಟೀ ಟ್ರೀ ಆಯಿಲ್‌ ತೆಗೆದುಕೊಂಡು ಸ್ಕಿನ್‌ ಮೇಲೆ ಹಚ್ಚಿ ಚೆನ್ನಾಗಿ ಮಸಾಜ್‌ ಮಾಡಿ.

*ದ್ರಾಕ್ಷೆಯ ಬೀಜದ ಆಯಿಲ್‌ ಸ್ಕಿನ್‌ನ್ನು ಸ್ಮೂತ್‌ ಮಾಡಿ ನೋವು ನಿವಾರಣೆ ಮಾಡುತ್ತದೆ. ಅಲ್ಲದೇ ಸ್ಕಿನ್‌ ಹೈಡ್ರೈಟ್‌ ಆಗಿರುವಂತೆ ನೋಡಿಕೊಳ್ಳುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದೂರ ಪ್ರಯಾಣ ಮಾಡುವಾಗ ವಾಂತಿ ಅಥವಾ ತಲೆ ಸುತ್ತುವ ಸಮಸ್ಯೆಗಳಿಗೆ ಇಲ್ಲಿದೆ ನೋಡಿ ಮನೆಮದ್ದು