Select Your Language

Notifications

webdunia
webdunia
webdunia
webdunia

ಮತ್ತೆ ಚರ್ಚೆಗೆ ಗ್ರಾಸವಾಗಲಿದೆ ಪ್ರತ್ಯೇಕ ಲಿಂಗಾಯತ ಧರ್ಮ

ಮತ್ತೆ ಚರ್ಚೆಗೆ ಗ್ರಾಸವಾಗಲಿದೆ ಪ್ರತ್ಯೇಕ ಲಿಂಗಾಯತ ಧರ್ಮ
bangalore , ಶನಿವಾರ, 28 ಜನವರಿ 2023 (15:15 IST)
ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತ್ತೆ ಪ್ರತ್ಯೇಕ ಧರ್ಮದ ಹೋರಾಟ ಮುನ್ನೆಲೆಗೆ ಬಂದಿದೆ.ಫೆಬ್ರವರಿ ತಿಂಗಳಿನಲ್ಲಿ ಲಿಂಗಾಯತ ಧರ್ಮ ಸಮಾವೇಶ ಆಯೋಜನೆ ಮಾಡಲಾಗಿದೆ.ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಮತ್ತೆ ಆರಂಭವಾಗಲಿದೆ.
 
ಸಾಂವಿಧಾನಿಕ ಹೋರಾಟಕ್ಕೆ ಬಸವಾದಿ ಅನುಯಾಯಿಗಳು ಸಜ್ಜಾಗಿದ್ದಾರೆ.ಲಿಂಗಾಯತ ಧರ್ಮದ ಕುರಿತು ಜಾಗೃತಿ ಮೂಡಿಸಲು ಸಮಾವೇಶ ಆಯೋಜನೆ ಮಾಡಲಾಗಿದ್ದು,ಒಂದು ದಿನದ ಸಮಾವೇಶದಲ್ಲಿ ಎರಡು ಗೋಷ್ಟಿ ಆಯೋಜನೆ ಮಾಡಲಾಗುತ್ತೆ.ಗೋಷ್ಟಿಗೂ ಮುನ್ನ ಇಷ್ಟಲಿಂಗ ದೀಕ್ಷೆ ಹಾಗೂ ಸಾಮೂಹಿಕ ಲಿಂಗಪೂಜೆ ನಡೆಯಲಿದೆ.ಈ ಹಿಂದೆ ಪ್ರತ್ಯೇಕ ಲಿಂಗಾಯತ ಹೋರಾಟದ ಮುಖಂಡರು, ಶರಣರು ಭಾಗಿಯಾಗಿದ್ರು.ಲಿಂಗಾಯತ ಧರ್ಮ ಅಲ್ಪಸಂಖ್ಯಾತವಾದುದು
ಕರ್ನಾಟಕದಲ್ಲಿ ಹುಟ್ಟಿದ ಧರ್ಮವೇ ಲಿಂಗಾಯತ ಧರ್ಮ.ಲಿಂಗಾಯತ ಧರ್ಮ ಒಪ್ಪಿ ಬರುವ ಆಸಕ್ತರ ನೋಂದಣಿಗೆ ಆಯೋಜಕರು ಮುಂದಾಗಿದ್ದಾರೆ.ಸಮಾವೇಶದಲ್ಲಿ ಕಾನೂನು ಹೋರಾಟದ ಬಗ್ಗೆ ಚರ್ಚೆಯಾಗಲಿದೆ.
 
ಸಾಣೇಹಳ್ಳಿ ಡಾ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಸಮಾವೇಶ ನಡೆಯಲ್ಲಿದ್ದು,ರಾಷ್ಟ್ರೀಯ ಬಸವ ಪ್ರತಿಷ್ಟಾನ ಹಾಗೂ ರಾಷ್ಟ್ರೀಯ ಬಸವ ತತ್ವ ಪರಿಷತ್ತು ಆಯೋಜನೆ ಫೆ.26ರಂದು ಸಾಣೇಹಳ್ಳಿ ಮಠದ ಆವರಣದಲ್ಲಿ ಮಾಡಲಾಗಿದೆ.ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು ಸಮಾವೇಶ ನಡೆಯಲಿದ್ದು,ಸಿದ್ದರಾಮಯ್ಯ, ಯಡಿಯೂರಪ್ಪ, ಎಂಬಿ ಪಾಟೀಲ್, ಹೊರಟ್ಟಿ ಪಕ್ಷಾತೀತವಾಗಿ ನಾಯಕರಿಗೆ ಆಹ್ವಾನ ನೀಡಲಾಗಿದೆ.ಬೃಹತ್ ಸಮಾವೇಶದಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ.ಲಿಂಗಾಯತ ಧರ್ಮ ಜಾತಿಯಲ್ಲ ಅದು ಸ್ವತಂತ್ರ ಧರ್ಮ ಬಸವಣ್ಣ ಧರ್ಮ ಗುರುವಚನ ಸಾಹಿತ್ಯ ಧರ್ಮ‌ ಗ್ರಂಥ ಮೂರು ಅಂಶ ಒಪ್ಪಿ ಬರುವವರಿಗೆ ಆಯೋಜಕರು ಆಹ್ವಾನ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಮಗಾರಿ ಆರಂಭದಲ್ಲೇ ಮುಚ್ಚಿದ ಪಾರ್ಕಿಂಗ್ ಕಟ್ಟಡ..!