Select Your Language

Notifications

webdunia
webdunia
webdunia
webdunia

ಕಾಮಗಾರಿ ಆರಂಭದಲ್ಲೇ ಮುಚ್ಚಿದ ಪಾರ್ಕಿಂಗ್ ಕಟ್ಟಡ..!

Parking building closed at the beginning of the work
bangalore , ಶನಿವಾರ, 28 ಜನವರಿ 2023 (15:11 IST)
ಸ್ವಾತಂತ್ರ್ಯ ಉದ್ಯಾನದ ಬಳಿ ಬಿಬಿಎಂಪಿ ನಿರ್ಮಿಸಿರುವ 'ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣ' ಕಟ್ಟಡದ ಕಾಮಗಾರಿ ಪೂರ್ಣಗೊಂಡು ಮೂರು ತಿಂಗಳಾದರೂ ಉದ್ಘಾಟನೆಗೆ ಕಾಲ ಕೂಡಿಬಂದಿಲ್ಲ.ಕಾಳಿದಾಸ ರಸ್ತೆ, ಕನಕದಾಸ ರಸ್ತೆ, ಶೇಷಾದ್ರಿಪುರಂ ರಸ್ತೆ, ಗಾಂಧಿ ನಗರದ ಸುತ್ತಮುತ್ತ ಪಾರ್ಕಿಂಗ್‌ ಸಮಸ್ಯೆ ಉಲ್ಬಣಿಸಿದೆ.ಕಟ್ಟಡವಿದ್ದರೂ ವಾಹನಗಳು ರಸ್ತೆ ಬದಿಯಲ್ಲೇ ನಿಲ್ಲುತ್ತಿವೆ.ಬಿಬಿಎಂಪಿಯು ನಗರೋತ್ಥಾನ ಯೋಜನೆ ಅಡಿ ₹ 78 ಕೋಟಿ ಅನುದಾನದಲ್ಲಿ ಕಟ್ಟಡ ನಿರ್ಮಾಣವಾಗಿದ್ದು,2017ರಲ್ಲಿ ಈ ಕಾಮಗಾರಿ ಆರಂಭವಾಗಿತ್ತು.2021ರ ಡಿಸೆಂಬರ್‌ಗೆ ಕಾಮಗಾರಿ ಮುಕ್ತಾಯವಾಗಬೇಕಿತ್ತು. ಆದರೆ, ಲಾಕ್‌ಡೌನ್‌ ವೇಳೆ ಕಾರ್ಮಿಕರ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಈಗ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿದ್ದಾರೆ.
 
ಕಟ್ಟಡದ ನಿರ್ವಹಣೆಗೆಂದು ಬಿಬಿಎಂಪಿ ಎರಡು ಬಾರಿ ಟೆಂಡರ್‌ ಕರೆದಿದ್ದರೂ ಯಾರೂ ಆಸಕ್ತಿ ತೋರಿಲ್ಲ.ಕಟ್ಟಡ ಗುತ್ತಿಗೆದಾರರಿಗೆ ಕೊನೆಯ ಕಂತಿನ ಹಣವು ಬಿಡುಗಡೆಯಾಗಿಲ್ಲ.ಇದೇ ಕಾರಣಕ್ಕೆ ಉದ್ಘಾಟನೆ ವಿಳಂಬವಾಗತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಸರ್ಕಾರ ತೆಗೆಯಬೇಕೆಂದು ಜನ ತೀರ್ಮಾನ ಮಾಡಿದ್ದಾರೆ- ಡಿಕೆಶಿ