Publish Date: Sat, 28 Jan 2023 (10:49 IST)
Updated Date: Sat, 28 Jan 2023 (00:10 IST)
ಬೆಂಗಳೂರು : ಕರ್ನಾಟಕ ಚುನಾವಣೆಗೆ ಇನ್ನೆರಡೂವರೆ ಮೂರು ತಿಂಗಳಷ್ಟೇ ಬಾಕಿ. ಬಿಜೆಪಿ ಟಿಕೆಟ್ ಲಿಸ್ಟ್ ನಲ್ಲಿ ನಾವ್ ಇರ್ತೀವಿ ಎಂಬ ಲೆಕ್ಕಾಚಾರ ಶುರುವಾಗಿದೆ.
ಕೊಕ್ ಕೊಡುವ ಬಗ್ಗೆ ಕುತೂಹಲ ಹೆಚ್ಚಾಗಿದ್ದು, 15 ಹಾಲಿ ಬಿಜೆಪಿ ಶಾಸಕರ ಹಿಟ್ ಲಿಸ್ಟ್. 5 ಬಿಜೆಪಿ ಶಾಸಕರ ಶಾರ್ಟ್ ಲಿಸ್ಟ್ ರೆಡಿಯಾಗಿದ್ದು, ಟಾರ್ಗೆಟ್ ಫಿಕ್ಸ್ ಆಗ್ತಿದೆ ಎನ್ನಲಾಗಿದೆ.
ಅಂದಹಾಗೆ 2023ರ ಚುನಾವಣೆಗೆ ಬಿಜೆಪಿ ಟಿಕೆಟ್ ನೀಡುವ ಹೈಕಮಾಂಡ್ ಲೆಕ್ಕಚಾರ ಖಡಕ್ ಆಗಿರುತ್ತಂತೆ. ಎಷ್ಟೇ ದೊಡ್ಡವರಿದ್ದರೂ ಬ್ಯಾಕ್ ಸೀಟ್ ನಲ್ಲಿ ಕೂರಬೇಕು ಎಂಬ ಸಂದೇಶ ರವಾನೆ ಆಗಿದೆ ಎಂಬ ಚರ್ಚೆ ಶುರುವಾಗಿದೆ.
ಈಗಾಗಲೇ ರೆಡಿ ಆಗಿರುವ 20 ಹಾಲಿ ಶಾಸಕರಿಗೆ ಕೊಕ್ ಕೊಡುವ ಲಿಸ್ಟ್ ಫೆಬ್ರವರಿ ಕಡೇ ವಾರದ ಬಳಿಕ ಅಂತಿಮವಾಗುವ ಸಾಧ್ಯತೆ ಇದ್ದು, ಶಾಸಕರಿಗೆ ಕೊಕ್ ಕೊಡುವ ಸಂಖ್ಯೆ ಹೆಚ್ಚಾದ್ರೂ ಆಗಬಹುದು. ಅಥವಾ ಕಡಿಮೆಯಾದ್ರೂ ಆಗಬಹುದಂತೆ.