Publish Date: Fri, 27 Jan 2023 (08:41 IST)
Updated Date: Fri, 27 Jan 2023 (10:43 IST)
ಬೆಂಗಳೂರು : ಚುನಾವಣೆ ಸಮೀಪಿಸ್ತಾ ಇದ್ದಂತೆ ಬಿಬಿಎಂಪಿ ಅಲರ್ಟ್ ಆಗಿದೆ. ರಸ್ತೆಗಳು ಚೆನ್ನಾಗಿ ಇರಬೇಕು ಅಂತಾ ಎಂಜಿನಿಯರ್ ಗಳಿಗೆ ಒಂದು ಖಡಕ್ ಆದೇಶ ಮಾಡಿದೆ.
ಈ ಆದೇಶ ಪಾಲಿಸದಿದ್ದರೆ ಎಂಜಿನಿಯರ್ ಗಳ ಸಂಬಳ ಕಟ್ ಮಾಡೋದಾಗಿ ಪಾಲಿಕೆ ಸೂಚಿಸಿದೆ.ಹೌದು. ಬೆಂಗಳೂರಿನಂತಹ ಮಹಾನಗರದಲ್ಲಿ ಬಿಬಿಎಂಪಿ ಎಡವಟ್ಟು ಮತ್ತು ಕಳಪೆ ಕಾಮಗಾರಿಗಳಿಂದ ಜನ ನರಕ ಅನುಭವಿಸ್ತಾ ಇದ್ದಾರೆ. ಅದರಲ್ಲಿ ರಸ್ತೆ ಗುಂಡಿ ಮತ್ತು ರಸ್ತೆ ಅಗೆತ ದೊಡ್ಡ ಸಮಸ್ಯೆ ಆಗಿ ಪರಿಣಮಿಸ್ತಾ ಇದೆ.
ಇದರ ವಿರುದ್ಧ ಸರ್ಕಾರಕ್ಕೆ ಜನ ಛೀಮಾರಿ ಹಾಕ್ತಾ ಇದ್ದು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕ್ತಾ ಇದ್ದಾರೆ. ಹೀಗಾಗಿ ಚುನಾವಣೆ ಹೊತ್ತಲ್ಲಿ ರಸ್ತೆಗಳು ಚೆನ್ನಾಗಿ ಇರಬೇಕು ಅಂತಾ ಬಿಬಿಎಂಪಿ ಒಂದು ಆದೇಶ ಮಾಡಿದೆ. ಪಾಲಿಕೆ ರಸ್ತೆ ಅಗೆತ ತಡೆಯಲು ಹೊಸ ಅಸ್ತ್ರವನ್ನ ಪ್ರಯೋಗ ಮಾಡಲು ಮುಂದಾಗಿದೆ.