Select Your Language

Notifications

webdunia
webdunia
webdunia
webdunia

ಕರ್ನಾಟಕ ರಾಜ್ಯದ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ಮೋದಿ..!

ಕರ್ನಾಟಕ ರಾಜ್ಯದ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ಮೋದಿ..!
bangalore , ಸೋಮವಾರ, 23 ಜನವರಿ 2023 (17:27 IST)
೨೦೨೩ ರ ರಾಜ್ಯ ವಿಧಾನಸಭಾ ಚುನಾವಣೆ ಮೂರು ಪಕ್ಷಗಳು ಹದ್ದಿನ ಕಣ್ಣಿಟ್ಟಿವೆ. ಈಗಗಾಲೇ ಚುನಾವಣೆ ಅಖಾಡಕ್ಕಿಳಿದಿರುವ ನಾಯಕರು ಭರ್ಜರಿ ಪ್ರಚಾರ ಮಾಡಿ ಘೋಷಣೆಗಳ ಮೇಲೆ ಘೊಷಣೆ ಮಾಡಿ ಮತ ಭೇಟಿ ಶುರುಮಾಡ್ತಿದ್ದಾರೆ ರಾಜಕೀಯ ನಾಯಕರು. ಒಂದು ಕಡೆ ಕಾಂಗ್ರೆಸ್ ನ ಬಸ್ ಯಾತ್ರೆ , ಜೆಡಿಎಸ್ ನ ಪಂಚರತ್ನ ಯಾತ್ರೆಗೆ ಬ್ರೇಕ್ ಹಾಕೋದಕ್ಕೆ ಕಮಲ ಕಲಿಗಳು ಚಕ್ರವ್ಯೂಹ ರಚಿಸಿ ಮಾಸ್ಟರ್ ಪ್ಲಾನ್ ಮಾಡ್ತಿದ್ದಾರೆ.

ವಿಧಾನಸಭಾ ಚುನಾವಣೆಗೆ ಆಢಳಿತ ಪಕ್ಷದ ತಯಾರಿ ಭರ್ಜರಿಯಾಗಿಯೇ ಮಾಡ್ತಿದೆ. ೧೫೦ ಸೀಟುಗಳನ್ನ  ಗೆದ್ದು ಮತ್ತೆ ಅಧಿಕಾರದ ಗದ್ದುಗೆ ಹಿಡಿಯಬೇಕಂತಾ ಸಾಲು ಸಾಲು ಸಮಾವೇಶಗಳನ್ನ ಮಾಡುತ್ತಾ ಮತಗಳ ಭೇಟೆಗೆ ರಣಕಹಳೆ ಮೊಳಗಿಸದ್ದಾರೆ. ಇದಕ್ಕೆ ಹೈಕಮಾಂಡ್ ನಾಯಕರು ಸಾಥ್ ನೀಡ್ತಿರೋದು ರಾಜ್ಯ ನಾಯಕರಿಗೆ ಶಕ್ತಿ ಬಂದಂತಾಗಿರೋದ್ರಲ್ಲಿ ಯಾವುದೇ ಅನುಮಾನವಿಲ್ಲಾ. ವಿಪಕ್ಷಗಳ ಆರೋಪ ಟೀಕೆಗಳಿಂದ ರಾಜ್ಯ ಸರ್ಕಾರಕ್ಕೆ ಕೊಂಚ ಹಿನ್ನಡೆಯಾಗಿದ್ರು ಹೈಕಮಾಂಡ್ ನಾಯಕರ ಅದ್ರಲ್ಲೂ ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ಪದೆ ಪದೇ ರಾಜ್ಯ ಪ್ರವಾಸ ಮಾಡ್ತಿರೋದ್ರಿಂದ ವಿಪಕ್ಷಗಳ ಆರೋಪಗಳಿಗೆ ತಕ್ಕ ಮಟ್ಟಿಗೆ ತಿರುಗೇಟು ನೀಡುವಂತಾಗಿದೆ.

ದಕ್ಷಿಣ ಭಾರತದಲ್ಲಿ ಕರ್ನಾಟಕವೇ ಪ್ರಧಾನಿ ಮೋದಿಗೆ ಹೆಬ್ಬಾಗಿಲು ಆಗಿರೋದ್ರಿಂದ ಈ ವರ್ಷದಲ್ಲಿ ೯ ರಾಜ್ಯಗಳ ಚುನಾವಣೆ ಇದ್ರು ಕರ್ನಾಟಕಕ್ಕೆ ಹೆಚ್ಚು ಸಮಯ ಮೀಸಲಿಟ್ಟಿರೋದು ಭಾರಿ ಕುತುಹಲ ಮೂಡಿಸಿದೆ. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೆ  ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಮಾತ್ರ ಬಾಕಿ ಇರೋದ್ರಿಂದ ರಾಜ್ಯದ ಚುನಾವಣೆ ಮಹತ್ವದ್ದಾಗಿದೆ. ಯಾಕಂದ್ರೆ ಇಡೀ ದಕ್ಷಿಣ ಭಾರತದಲ್ಲಿ ಹೆಚ್ಚು ಲೋಕಸಭಾ ಸದಸ್ಯರು ಗೆದ್ದು ಬಂದಿರೋದು ಕರ್ನಾಟಕದಿಂದಲೇ. ಈ ಬಗ್ಗೆ ಭವಿಷ್ಯದ ಪ್ಲಾನ್ ಮಾಡಿರುವ ಹೈಕಮಾಂಡ್ ನಾಯಕರು ರಾಜ್ಯಕ್ಕೆ ಪದೇ ಪದೇ ಆಗಮಿಸಿ ಸರ್ಕಾರಿ ಕಾರ್ಯಕ್ರಮಗಳ ಮೂಲಕ ಶಕ್ತಿ ಪ್ರದರ್ಶನ ಮಾಡಿ ವಿಪಕ್ಷಗಳಿಗೆ ತಿರುಗೇಟು ನೀಡುವಲ್ಲಿ ಬಿಜೆಪಿ ಹೈಕಮಾಂಡ್ ನಾಯಕರು ರಣತಂತ್ರ ರೂಪಿಸಿದ್ದಾರೆ.
ಉತ್ತರ ಕರ್ನಾಟಕ ಹಾಗೂ  ಹಳೇ ಮೈಸೂರು ಭಾಗದ ಮೇಲೆ ಹೈ ಅಲರ್ಟ್ ಆಗಿರುವ ಬಿಜೆಪಿ ನಾಯಕರು ವಿವಿಧ ಯೋಜನೆಗಳ ಅನುಷ್ಠಾನ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಹೈ ಕಮಾಂಡ್ ನಾಯರಕರು ರಾಜ್ಯಕ್ಕೆ ಆಗಮಿಸ್ತಿದ್ದಾರೆ. ಇನ್ನೂ ರಾಜ್ಯ ನಾಯಕರಿ ಅಂದುಕೊಂಡಂತೆ ತಮ್ಮ ಪ್ರಾಬಲ್ಯ ತೋರಿಸಲು ವಿಫಲರಾಗ್ತಿದ್ದು ಹಾಗಾಗಿ ಹೈಕಮಾಂಡ್ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ ಅಂತಾ ಪಕ್ಷದ ವಲಯದಲ್ಲೇ ಚರ್ಚೆಯಾಗ್ತಿದೆ ಎಂದು ಹೇಳಲಾಗ್ತಿದೆ. ಈ ವಿಚಾರದ ಬಗ್ಗೆ ಪ್ರಧಾನಿ ಮೋದಿ ಕೂಡ  ಹೆಚ್ಚು ಅವಲಂಬಿತರಾಗದೆ ನಿಮ್ಮ ಪ್ರಾಬಲ್ಯ ತೋರಿಸಿ ಕಾರ್ಯಕರ್ತರನ್ನ ಹುರಿದುಂಬಿಸಿ ವಿವಿಧ ಕಾರ್ಯಕ್ರಮಗಳನ್ನ ಜಾರಿಗೆ ತನ್ನಿ ಎಂಬ ಕಿವಿ ಮಾತನ್ನ ಹೇಳುವುದರ ಜೊತೆಗೆ ಹೆಚ್ಚು ಟಾಸ್ಕ್ ಗಳನ್ನ ನೀಡಿದ್ದಾರೆ. 

ಒಂದೇ ತಿಂಗಳಲ್ಲಿ ಎರಡು ಬಾರಿ ರಾಜ್ಯಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ಮತ್ತೆ ಸರ್ಕಾರಿ ಕಾರ್ಯಕ್ರಮಕ್ಕೆ  ಆಗಮಿಸುತ್ತಿದ್ದಾರೆ. ಜನವರಿ ೧೨ ರಂದು ಹುಬ್ಬಳಿ ಧಾರವಾಡಕ್ಕೆ ಭೇಟಿ ನೀಡಿ ಯುವ ಜನೋತ್ಸವದಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿ,19 ರಂದು  ಕಲ್ಬುರ್ಗಿ ಯಾದಗಿರಿ ಪ್ರವಾಸ ಆಗಮಿಸಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ರು. ಇದೀಗ ಮತ್ತೆ  ಫೆಬ್ರವರಿ 6 ರಂದು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ದಾರವಾಡ ಹಾಗೂ ತುಮಕೂರಿಗೆ  ಪ್ರಧಾನಿ ಮೋದಿ ಆಗಮಿಸ್ತಿದ್ದಾರೆ.ಧಾರವಾಡ ಐಐಟಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ತುಮಕೂರಿನ ಗುಬ್ಬಿ ಬಳಿಯ ಹೆಚ್ ಎಎಲ್ ಹೆಲಿಕಾಪ್ಟರ್ ಘಟಕವನ್ನ  ಉದ್ಘಾಟನೆ ಮಾಡಲಿದ್ದಾರೆ.  ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಲಕ್ಷಾಂತರ ಜನರನ್ನ ಸೇರಿಸಲು ಬಿಜೆಪಿ ನಾಯಕರು ಪ್ಲಾನ್ ಮಾಡುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ನ ಬಸ್ ಯಾತ್ರೆ,ಜನಧ್ವನಿ ಗೆ ಪ್ರತಿತಂತ್ರ ಸೇರಿದಂತೆ ಜೆಡಿಎಸ್ ನ‌ ಪಂಚರತ್ನ ಯಾತ್ರೆಯ ಪ್ರಭಾವವನ್ನ ಜನರ ಮನಸ್ಸಲ್ಲಿ ಕಡಿಮೆ ಮಾಡೋದಕ್ಕೆ ಯಾತ್ರೆಗಳು ಹೋದ ಕಡೆ ಬಿಜೆಪಿ ನಾಯಕರು  ಟಾರ್ಗೆಟ್ ಮಾಡುತ್ತಿದ್ದಾರಾ ಎಂಬ ಚರ್ಚೆ ಶುರುವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಚ್ಚಾ ವಸ್ತುವಿನಿಂದ ಹಿಡಿದು, ತಂತ್ರಜ್ಞಾನ ಅಭಿವೃದ್ಧಿವರೆಗೆ ಸರ್ಕಾರ ಸಹಾಯ