Publish Date: Mon, 23 Jan 2023 (15:07 IST)
Updated Date: Mon, 23 Jan 2023 (15:09 IST)
ಸರ್ಕಾರದ ವಿರುದ್ದ ಸುಮಾರು ೩೦೦ ಕಡೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಧರಣಿ ಮಾಡಲು ಮುಂದಾಗಿದ್ದಾರೆ.ಗಾಂಧಿನಗರ ಕ್ಷೇತ್ರ ವ್ಯಾಪ್ತಿಯಲ್ಲಿ ದಿನೇಶ್ ಗುಂಡೂರಾವ್ ಬೆಂಬಲಿಗರಿಂದ ಧರಣಿ ನಡೆಯುತ್ತಿದೆ. ಮಂತ್ರಿ ಮಾಲ್ ನಿಲ್ದಾಣದ ಮುಂದೆ ಸರವಣ ನೇತೃತ್ವದಲ್ಲಿ ಧರಣಿ ನಡೆಯುತ್ತಿದೆ.
ಹೀಗೆ ಭ್ರಷ್ಟಾಚಾರದ ವಿರುದ್ದ ಕೈ ಮುಖಂಡರು ಧರಣಿ ನಡೆಸುತ್ತಿದ್ದು,ಬೆಂಗಳೂರು ಜಿಲ್ಲಾ ಕಾಂಗ್ರೆಸ್ ವತಿಯಿಂದಲ್ಲೂ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಗೆ ಪ್ರಜಾಧ್ವನಿ ಬಸ್ ಮೂಲಕ ಕೈ ನಾಯಕರು ಆಗಮಿಸಿದ್ರು.ನಗರದ ಟ್ರಿನಿಟಿ ಸರ್ಕಲ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕೆಪಿಸಿಸಿ ಆಧ್ಯಕ್ಷ ಡಿಕೆಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಪರಿಷತ್ ವಿಪಕ್ಷನಾಯಕ ಬಿಕೆ ಹರಿಪ್ರಸಾದ್ ಭಾಗಿಯಾಗಿದ್ರು.
ಇನ್ನು ಕೋಲಾರದಲ್ಲಿ ಪ್ರಜಾಧ್ವನಿ ಯಾತ್ರೆ ಹಿನ್ನೆಲೆ ಕಾಂಗ್ರೆಸ್ ನಾಯಕರು ಕೋಲಾರಕ್ಕೆ ಬಸ್ ಮೂಲಕ ಹೋರಟಿದ್ದಾರೆ.