Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಅಯ್ಯವ್ಯಯದ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹ

ಬಿಬಿಎಂಪಿ ಅಯ್ಯವ್ಯಯದ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹ
bangalore , ಸೋಮವಾರ, 23 ಜನವರಿ 2023 (14:48 IST)
ಬಿಬಿಎಂಪಿ ವಾರ್ಷಿಕವಾಗಿ ನಗರದಾದ್ಯಂತ ನನ್ನ ನಗರ ನನ್ನ ಬಜೆಟ್ ಅಭಿಯಾನದಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿರುವ ಅಭಿಪ್ರಾಯ ಸಲಹೆಗಳ ವಿಸ್ತೃತ ಮಾಹಿತಿಯುಳ್ಳ ಕಿರುಹೊತ್ತಿಗೆ ಯನ್ನ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಬಿಡುಗಡೆಗೊಳಿಸಿದರು.
 
ಬಿಬಿಎಂಪಿ ವಾರ್ಷಿಕವಾಗಿ ನಗರದಾದ್ಯಂತ ನನ್ನ ನಗರ ನನ್ನ ಬಜೆಟ್ ಅಭಿಯಾನವನ್ನು ಹಲವಾರು ಸಂಘ ಸಂಸ್ಥೆಗಳು, ಕ್ಷೇಮಾಭಿವೃದ್ಧಿ ಸಂಘಗಳು, ಬೆಂಗಳೂರು ವಾರ್ಡ್ ಸಮಿತಿ ಬಳಗ ಹಾಗೂ ಜನಾಗ್ರಹ ಸಂಸ್ಥೆಯ ಬೆಂಬಲದೊಂದಿಗೆ ಕೈಗೊಂಡಿದ್ದ ನಾಗರಿಕರ ಸಹಭಾಗಿತ್ವದ ಬಜೆಟ್ ಕುರಿತು ಅಭಿಪ್ರಾಯ ಸಂಗ್ರಹಣೆ ಮಾಡುವ ಪ್ರಕ್ರಿಯೆಯ 7ನೇ ಆವೃತ್ತಿಯು ಮುಗಿದಿದ್ದು, ನಗರದ 8 ವಲಯದಲ್ಲಿರುವ ಎಲ್ಲ 243 ವಾರ್ಡ್ ಗಳಿಂದ ನಾಗರಿಕರಿಂದ ಸಂಗ್ರಹಿಸಿರುವ ಅಭಿಪ್ರಾಯಗಳ ಪ್ರಮುಖ ಅಂಶಗಳ ಕುರಿತು ಮುಖ್ಯ ಆಯುಕ್ತರು ಮಾಧ್ಯಮ ಗೋಷ್ಠಿಯಲ್ಲಿ ವಿವರಣೆ ನೀಡಿದರು.
 
ನನ್ನ ನಗರ ನನ್ನ ಬಜೆಟ್ ಅಭಿಯಾನದ ಅಂಗವಾಗಿ ನಗರದ ಎಲ್ಲಾ 243 ವಾರ್ಡ್ ಗಳಲ್ಲಿಯೂ ಬಜೆಟ್ ಬಸ್ ಮೂಲಕ 31 ದಿನಗಳ ಕಾಲ ಸಂಚರಿಸಿ ನಾಗರಿಕರಿಂದ 16,261 ಸಲಹೆಗಳು ಪಡೆಯಲಾಗಿದ್ದು, ಪ್ರಮುಖವಾಗಿ ಪಾದಚಾರಿ ಮಾರ್ಗ, ರಸ್ತೆ ಹಾಗೂ ಒಳಚರಂಡಿ ನಿರ್ವಹಣೆ, ರಸ್ತೆ ದುರಸ್ತಿ, ಪಾದಚಾರಿ ಮಾರ್ಗ ನಿರ್ಮಾಣಸರಿಪಡಿಸುವುದು, ಬೀದಿ ದೀಪಗಳನ್ನು ಅಳವಡಿಸುವುದು, ಘನತ್ಯಾಜ್ಯ ನಿರ್ವಹಣೆ ಸೇರಿದಂತೆ ಇನ್ನಿತರೆ ಸಲಹೆಗಳನ್ನು ನೀಡಿರುವ ಬಗ್ಗೆ ಜನಾಗ್ರಹ ಸಂಸ್ಥೆಯು ವರದಿ ನೀಡಿರುತ್ತಾರೆ.
 
ನನ್ನ ನಗರ ನನ್ನ ಬಜೆಟ್ ಅಭಿಯಾನಕ್ಕೆ ಸಂಬಂಧಿಸಿದಂತೆ ನಾಗರಿಕಂರಿಂದ ಬಂದ ಸಲಹೆಗಳ ವಿಸ್ತೃತ ಮಾಹಿತಿಗಾಗಿ ಈ ಲಿಂಕ್( https://linktr.ee/Janaagraha )ಗೆ ಭೇಟಿ ನೀಡಬಹುದು.ಈ ವೇಳೆ ವಿಶೇಷ ಆಯುಕ್ತರು,ಹಣಕಾಸು ಜಯರಾಮ್ ರಾಯಪುರ, ವಿಶೇಷ ಆಯುಕ್ತ ಡಾ. ಆರ್.ಎಲ್.ದೀಪಕ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿ ಆರೋಪಕ್ಕೆ ಸಿಎಂ ಟಕ್ಕರ್