Select Your Language

Notifications

webdunia
webdunia
webdunia
webdunia

ಡಿಕೆಶಿ ಆರೋಪಕ್ಕೆ ಸಿಎಂ ಟಕ್ಕರ್

ಡಿಕೆಶಿ ಆರೋಪಕ್ಕೆ ಸಿಎಂ ಟಕ್ಕರ್
bangalore , ಸೋಮವಾರ, 23 ಜನವರಿ 2023 (14:18 IST)
ರಿಪಬ್ಲಿಕ್ ಡೇ ದಿನ ಕರ್ನಾಟಕದ ಟ್ಯಾಬ್ಲೋ ವಿಚಾರವಾಗಿ ಸಿಎಂ ಪ್ರತಿಕ್ರಿಯಿಸಿದಾರೆ. ಡಿಕೆಶಿ ಆರೋಪಕ್ಕೆ ಸಿ ಎಂ ಪ್ರತ್ಯುತ್ತರ ನೀಡಿದ್ದಾರೆ.
 
ಕೆಪಿಸಿಸಿ ಅಧ್ಯಕ್ಷರದ್ದು ಆಹಾ ಏನು ಆರ್ಭಟ.2009 ರಲ್ಲಿ ಯುಪಿಎ ಸರ್ಕಾರ ಇದ್ದಾಗ ನಾವು ಟ್ಯಾಬ್ಲೋ‌ ಕಳಿಸಿದ್ವಿ, ಆಗ ನಿರಾಕರಣೆ ಮಾಡಿದ್ರು.ಆಗ ನಮ್ಮ ರಾಜ್ಯದ ಯಾವ ಕಾಂಗ್ರೆಸ್ ನಾಯಕರೂ ಯುಪಿಎ ಮೇಲೆ ಒತ್ತಡ ಹಾಕಲಿಲ್ಲ.ಆ ವರ್ಷ ನಮ್ಮ ರಾಜ್ಯದ ಟ್ಯಾಬ್ಲೋ ಬರಲೇ ಇಲ್ಲ.ಆ ನಂತರ ಸತತ 14 ವರ್ಷ ಟ್ಯಾಬ್ಲೋ ಪ್ರದರ್ಶನ ಆಯ್ತು.ನಾನು ನಮ್ಮ ರಕ್ಷಣಾ ಸಚಿವರ ಜತೆ ಮಾತಾಡಿದೆ, ಜೋಷಿಯವರೂ ಮಾತಾಡಿದರು.ಈಗ ನಮ್ಮ ರಾಜ್ಯದ ಸ್ತಬ್ಧಚಿತ್ರಕ್ಕೆ ಅನುಮತಿ ಸಿಕ್ಕಿದೆ.ನಾರೀ ಶಕ್ತಿ ಪರಿಕಲ್ಪನೆಯ ಸ್ತಬ್ಧಚಿತ್ರ ಪ್ರದರ್ಶನ ಆಗ್ತಿದೆ.ಕೇವಲ ಎಂಟ್ಹತ್ತು ದಿನಗಳ ಅದ್ಭುತವಾಗಿ ಸ್ತಬ್ಧಚಿತ್ರ ತಯಾರಿಸಲಾಗಿದೆ.ಕರ್ನಾಟಕದ ವಿಚಾರ ಬಂದಾಗ ಎಲ್ಲರೂ ಒಂದಾಗಬೇಕು.ಸಣ್ಣ ಸಣ್ಣ ಭಾವನೆ ಬಿಟ್ಟು ಒಂದಾಗಬೇಕು.ಈಗಲಾದರೂ ಕಾಂಗ್ರೆಸ್‌ನವರು ಪಾಠ ಕಲಿಯಲಿ ಎಂದು ಸಿಎಂ ಹೇಳಿದ್ರು.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರಿಗೂ ಕ್ಯಾರೆ ಅನ್ನದೇ ಬೈಕ್ ವ್ಹೀಲಿಂಗ್.