Publish Date: Mon, 23 Jan 2023 (12:05 IST)
Updated Date: Mon, 23 Jan 2023 (12:09 IST)
ಮಂಗಳೂರು: ನೇಣು ಬಿಗಿದುಕೊಂಡು ವಿವಾಹಿತೆಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರು ಸುರತ್ಕಲ್ ನ ಬಾಳ ಗ್ರಾಮದಲ್ಲಿ ನಡೆದಿದೆ.
ಬಾಳ ನಿವಾಸಿ ದಿವ್ಯಾ (26) ಮೃತ ಮಹಿಳೆ. ದಿವ್ಯಾ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನೆಂದು ತಿಳಿದುಬಂದಿಲ್ಲ.
ಖeಟಚಿಣeಜ
ಏನಿದು ಪ್ರಕರಣ..?: ದಿವ್ಯಾ ತನ್ನ ಪತಿ ಜೊತೆ ನೆರೆ ಮನೆಯ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಆದರೆ ಕಾರ್ಯಕ್ರಮ ಮುಗಿಸಿ ದಿವ್ಯಾ ಒಬ್ಬರೇ ಮನೆಗೆ ವಾಪಸ್ಸಾಗಿದ್ದರು.
ಪತಿ ಸ್ವಲ್ಪ ತಡವಾಗಿ ಕಾರ್ಯಕ್ರಮದಿಂದ ಹೊರಟು ಬಂದರು. ಮನೆಗೆ ಬಂದಾಗಿ ದಿವ್ಯಾ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ.