Publish Date: Fri, 20 Jan 2023 (15:32 IST)
Updated Date: Fri, 20 Jan 2023 (15:34 IST)
ತುಮಕೂರು : ಅನಾಥರಾಗಿದ್ದ ಮೂವರು ಸಹೋದರಿಯರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, 9 ದಿನಗಳ ನಂತರ ಪ್ರಕರಣ ತುಮಕೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಚಿಕ್ಕನಾಯಕನಹಳ್ಳಿ ತಾಲೂಕು, ಹುಳಿಯಾರು ಹೋಬಳಿ ಬರಕನಹಾಲ್ ತಾಂಡ್ಯದ ರಂಜಿತಾ (24), ಚಂದನಾ (21 ) ಹಾಗೂ ಬಿಂದು (18) ಆತ್ಮಹತ್ಯೆ ಮಾಡಿಕೊಂಡ ಸಹೋದರಿಯರಾಗಿದ್ದು, ಗುರುವಾರ ಸಂಜೆ ಪ್ರಕರಣ ಬೆಳಕಿಗೆ ಬಂದಿದೆ.
ಹತ್ತು ವರ್ಷದ ಹಿಂದೆಯೇ ತಂದೆ-ತಾಯಿ ಕಳೆದುಕೊಂಡು ಅಜ್ಜಿಯ ಆಶ್ರಯದಲ್ಲಿದ್ದ ಮೂವರು ಯುವತಿಯರಿಗೆ ಅಜ್ಜಿಯೂ ಸಾವಿನಪ್ಪಿದ್ದು ಮಾನಸಿಕ ಖಿನ್ನತೆಗೆ ಒಳಗಾಗುವಂತೆ ಮಾಡಿತ್ತು ಎನ್ನಲಾಗಿದೆ.
ಇಬ್ಬರು ಕಿಬ್ಬನಹಳ್ಳಿಯ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡಿಕೊಂಡು ಕುಟುಂಬ ಸಾಗಿಸುತ್ತಿದ್ದರು. ಬಾಲದೇವರ ಹಟ್ಟಿಯಿಂದ ಬರಕನಾಲ್ ತಾಂಡ್ಯಕ್ಕೆ ಹೋಗುವ ದಾರಿಯ ರಸ್ತೆ ಬದಿಯಲ್ಲಿರುವ ಒಂಟಿ ಮನೆಯಲ್ಲಿ ಒಂಭತ್ತು ದಿನದ ಹಿಂದೆ ನೇಣಿಗೆ ಶರಣಾಗಿದ್ದಾರೆ.