Select Your Language

Notifications

webdunia
webdunia
webdunia
webdunia

ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರಿಗೂ ಕ್ಯಾರೆ ಅನ್ನದೇ ಬೈಕ್ ವ್ಹೀಲಿಂಗ್.

ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರಿಗೂ ಕ್ಯಾರೆ ಅನ್ನದೇ ಬೈಕ್ ವ್ಹೀಲಿಂಗ್.
ನೆಲಮಂಗಲ , ಸೋಮವಾರ, 23 ಜನವರಿ 2023 (13:04 IST)
ನೆಲಮಂಗಲ: ತಮ್ಮ ಪ್ರಾಣದ ಜೊತೆಗೆ ಇತರೆ ಬೈಕ್ ಸವಾರರ ಜೀವದ ಜೊತೆಗೂ ಚೆಲ್ಲಾಟ ಆಡ್ತಿರೋ ಯುವಕರ ಪುಂಡಾಟದ ದೃಶ್ಯ ಎದೆ ಝಲ್ಲೆನ್ನಿಸುವಂತಿದೆ.
 
ಹೌದು. ಬೆಂಗಳೂರು  ಹೊರವಲಯ ನೆಲಮಂಗಲ ತಾಲೂಕಿನ ಬೂದಿಹಾಳ್ ನಿಂದ ಡಾಬಸ್ ಪೇಟೆಯವರೆಗಿನ ಎನ್.ಎಚ್-48 ಹೆದ್ದಾರಿಯಲ್ಲಿ ಕೆಲ ಯುವಕರು ಪುಂಡಾಟ ಮೆರೆದಿದ್ದಾರೆ. ಹೆದ್ದಾರಿಯಲ್ಲಿ ಭಾರೀ ವಾಹನಗಳ ಸಂಚಾರದ ನಡುವೆಯೂ ಕೆಲ ಪುಂಡರು ಬೈಕ್ ವ್ಹೀಲಿಂಗ್ ಮಾಡಿದ್ದಾರೆ.

ಪೊಲೀಸರಿಗೂ ಕ್ಯಾರೆ ಎನ್ನದೇ ಮರ್ನಾಲ್ಕು ಬೈಕ್ ಸವಾರರು ರಾಜರೋಷವಾಗಿ ವ್ಹೀಲಿಂಗ್ ಮಾಡಿದ್ದಾರೆ. ಇನ್ನೂ ಇಂತಹ ಅಪಾಯಕಾರಿಯಿಂದ ವೇಗದ ಚಾಲನೆ ಕೂಡ ಮೃತ್ಯುಕೂಪದ ದಾರಿಗೆ ಕಾರಣವಾಗಿದೆ. ಅಲ್ಲದೇ ಅಪಘಾತವಾದ್ರೆ ಸಾವು ನೋವಾಗುವ ಸಂದರ್ಭ ಕೂಡ ಜಾಸ್ತಿಯಾಗಿರುತ್ತದೆ. ಇಂತಹ ಅಪಾಯಕಾರಿ ಡೆಡ್ಲಿ ಬೈಕ್ ವ್ಹೀಲಿಂಗ್ ನಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಇತರ ವಾಹನ ಸವಾರರಿಗೂ ಆತಂಕ ಉಂಟಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಿದ್ರೆಯಲ್ಲಿರೋ ನಮ್ಮ ಮೆಟ್ರೋ!