ಕರ್ನಾಟಕ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಒಬ್ಬರ ಮೇಲೆ ಒಬ್ಬರು ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತ ಕಾಲೆಳೆದುಕೊಳ್ಳುವುದು ಹೆಚ್ಚಾಗಿದೆ. ಸದ್ಯ ಕಾಂಗ್ರೆಸ್ ವಿರುದ್ಧ ರಾಜ್ಯ ಬಿಜೆಪಿ ಘಟಕ ಟ್ವೀಟ್ ವಾರ್ ಮಾಡಿದೆ. ಭಯೋತ್ಪಾದನೆ ಜೊತೆ ಕಾಂಗ್ರೆಸ್ಗಿರುವ ಸಂಬಂಧದ ಬಗ್ಗೆ ತಿಳಿಯಿರಿ ಎಂದು ಟ್ವೀಟ್ ಮೂಲಕ ಸಿದ್ದರಾಮಯ್ಯಗೆ ರಾಜ್ಯ ಬಿಜೆಪಿ ಘಟಕ ತಿರುಗೇಟು ಕೊಟ್ಟಿದೆ. ಸಿದ್ದರಾಮಯ್ಯನವರೇ, ಆ ಕಾಲದಲ್ಲಿ ನೀವಿನ್ನೂ ಕಾಂಗ್ರೆಸ್ಗೆ ಹೋಗಿರಲಿಲ್ಲ. ಭಯೋತ್ಪಾದನೆ ಜೊತೆಗಿನ ಸಂಬಂಧದ ಬಗ್ಗೆ ಡಿಕೆಶಿ ನಿಮಗೆ ತಿಳಿಸಿರಲ್ಲ. ಹಾಗಾಗಿ ನಾವು ಈ ವಿಚಾರವನ್ನು ನಿಮಗೆ ತಿಳಿಸಬೇಕಾಯಿತು. ಬಸ್ನಲ್ಲಿ ಬಿಡುವು ಮಾಡಿಕೊಂಡು ಓದಿ ಜ್ಞಾನ ಸಂಪಾದಿಸಿಕೊಳ್ಳಿ ಎಂದು ಟ್ವೀಟ್ ಮೂಲಕ ಸಿದ್ದರಾಮಯ್ಯಗೆ ರಾಜ್ಯ ಬಿಜೆಪಿ ಘಟಕ ತಿರುಗೇಟು ಕೊಟ್ಟಿದೆ. ಭಯೋತ್ಪಾದನೆ ಜೊತೆ ಕೈ ಮಿಲಾಯಿಸಿದ ಇತಿಹಾಸ ಕಾಂಗ್ರೆಸ್ಸಿಗಿದೆ. ಕೊನೆಗೆ ಅದೇ ವಿಚಾರಕ್ಕೆ ರಾಜೀವ್ ಗಾಂಧಿ ಹತ್ಯೆಯಾಯಿತು. ಆದರೆ ಈ ರೀತಿ ಇದ್ದ ಸಂಬಂಧವನ್ನ ರಾಜೀವ್ ಗಾಂಧಿ ಅಸ್ಥಿರಗೊಳಿಸಿದರು. ರಾಜೀವ್ ಗಾಂಧಿ ಅಸ್ಥಿರಗೊಳಿಸಿದರು ಎಂಬ ಕೋಪ ಎಲ್ಟಿಟಿಇಗೆ ಇತ್ತು. ಶ್ರೀಲಂಕಾಗೆ ಶಾಂತಿ ಪಾಲನಾ ಪಡೆ ಕಳುಹಿಸಿದ ರಾಜೀವ್ ಗಾಂಧಿ ಭಾರತದ ಗುಪ್ತಚರ ಸಂಸ್ಥೆ ಜೊತೆ ಭಾರತೀಯ ಸೇನೆಯನ್ನೇ ಯುದ್ಧಕ್ಕಿಳಿಸಿದ್ರು. ಶ್ರೀಲಂಕಾ ಸೇನೆ ಜೊತೆ ಎಲ್‌ಟಿಟಿಇ ಯುದ್ಧ ಮಾಡಿದಾಗಲೆಲ್ಲ ಅವರಿಗೆ ಶಸ್ತ್ರಾಸ್ತ್ರ, ವೈದ್ಯಕೀಯ ನೆರವೂ ಸಿಗುತ್ತಿದುದು ಭಾರತದಲ್ಲಿಯೇ. ಅವರ ನಿತ್ಯದ ಆಗುಹೋಗುಗಳು ವರದಿಯಾಗುತ್ತಿದ್ದದ್ದು ಕಾಂಗ್ರೆಸ್ಗೆ. ತಾವು ಈಗ ಇರುವಂಥದ್ದು ಭಯೋತ್ಪಾದನೆಯ ಲೆಕ್ಕ ಇಟ್ಟ ಪಕ್ಷದಲ್ಲಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.