Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

15 ನೇ ದಿನಕ್ಕೆ ಕಾಲಿಟ್ಟ ಪಂಚಮಸಾಲಿ ಲಿಂಗಾಯತ ಮೀಸಲಾತಿ ಹೋರಾಟ

webdunia
ಶನಿವಾರ, 28 ಜನವರಿ 2023 (14:51 IST)
15 ನೇ ದಿನಕ್ಕೆ ಪಂಚಮಸಾಲಿ ಲಿಂಗಾಯತ ಮೀಸಲಾತಿ ಹೋರಾಟ ಕಾಲಿಟ್ಟಿದೆ.ಬಸವಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಧರಣಿ ನಡೆಯುತ್ತಿದ್ದು,ಇಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಫ್ರೀಡಂಪಾರ್ಕ್ ನಲ್ಲಿ ಸುದ್ದಿಗೋಷ್ಠಿ ನಡೆಸಲಾಗಿದೆ.
 
ಈ ವೇಳೆ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಇವತ್ತು ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮೀತ್ ಶಾ ಭೇಟಿ ಮಾಡುತ್ತಿದ್ದಾರೆ.ಅವರು ಭೇಟಿ ಮಾಡುತ್ತಿರೋ ಪ್ರದೇಶಗಳೆಲ್ಲ ಪಂಚಮಸಾಲಿ ಸಮೂದಾಯವರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಈಗಾಗಲೇ ನಾವು ಪ್ರಧಾನಿಗಳು, ಗೃಹಸಚಿವರಿಗೆ ಹಾಗೂ ನಡ್ಡಾ ಅವರಿಗೆ ಪತ್ರ ಬರೆದಿದ್ದೇವೆ.ಕಾರಣ ಸಿಎಂ ಈಗಾಗಲೇ 6 ಬಾರಿ ಮಾತುಕೊಟ್ಟು ತಪ್ಪಿದ್ದಾರೆ.ಹಿನ್ನಲೆ ಅವರ ಬೆಂಬಲ ಬೇಡ ಎಂದು  ಕೇಂದ್ರ ಸರ್ಕಾರದ ಮೊರೆ ಹೋಗಿದ್ದೇವೆಮನಂತ್ರ ಪತ್ರ ಬರೆದಿದ್ವೀ, ಆ ಪತ್ರಕ್ಕೆ ಸಂಬಂಧಪಟ್ಟಂತೆ ಚರ್ಚೆಗಳು ಶುರುವಾಗಿವೆ.ಈ ಮೂಲಕ ಅಮಿತ್ ಶಾ ಅವರಿಗೆ ಮಾನವಿ ಮಾಡಿಕೊಳ್ಳುತ್ತೇವೆ.ಬಿಜೆಪಿಗೆ ಶೇ. 80 ರಷ್ಟು ಬೆಂಬಲವನ್ನ ಈ ಸಮೂದಾಯವೇ ನೀಡಿದೆ.
 
ಕರ್ನಾಟಕದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟದ ಬಗ್ಗೆ ರಾಜ್ಯ ಬಿಜೆಪಿ ಮುಖಂಡರು ಹೋರಾಟದ ತೀವ್ರತೆಯ ಬಗ್ಗೆ, ಹೋರಾಟದ ಮುಂದಿನ ಪರಿಣಾಮದ ಬಗ್ಗೆ ನಿಮಗೆ ಮಾಹಿತಿ ಕೊಡಲು ವಿಫಲಗೊಂಡಿದ್ದಾರೆ ಅನಿಸುತ್ತೆ.ಆದ್ದರಿಂದಲೇ ನಾವು ನೇರವಾಗಿ ನಿಮಗೆ ಪತ್ರ ಬರೆದಿದ್ದೇವೆ.ಪತ್ರದಲ್ಲಿ ಸಂಪೂರ್ಣವಾಗಿ ಉಲ್ಲೇಖ ಮಾಡಿದ್ದೇನೆ.ನಾವು ಕೇಳಿರೋದು 2ಎ ಮೀಸಲಾತಿ 2ಎ ಮೀಸಲಾತಿಗೆ ಸಮನಾಗಿ ಎ ಯಿಂದ Z ವರೆಗೆ ಯಾವುದಾದರೂ ಒಂದು ಮೀಸಲಾತಿ ಕೊಡಿ .ಅಮಿತ್ ಶಾ ಅವರು ಸಿಎಂ ಅವರಿಗೆ ಒತ್ತಾಡ ಹಾಕಿ ನಮಗೆ ಮೀಸಲಾತಿ ನೀಡಲು ತಿಳಿಸಬೇಕು ಸ್ವಾಮೀಜಿ ಎಂದು ಹೇಳಿದ್ರು

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಕೆಲ ಬಿಜೆಪಿ ಹಾಲಿ ಶಾಸಕರಿಗೆ ಬಿಗ್ ಶಾಕ್!