Select Your Language

Notifications

webdunia
webdunia
webdunia
webdunia

ನಾಳೆಯಿಂದ 6 ರಿಂದ 8ನೇ ತರಗತಿ ವರೆಗೆ ಶಾಲಾರಂಭ

ನಾಳೆಯಿಂದ 6 ರಿಂದ 8ನೇ ತರಗತಿ ವರೆಗೆ ಶಾಲಾರಂಭ
bangalore , ಭಾನುವಾರ, 5 ಸೆಪ್ಟಂಬರ್ 2021 (21:00 IST)
ಬೆಂಗಳೂರು: ಬರೋಬ್ಬರಿ 2 ವರ್ಷಗಳ ನಂತರ ಪ್ರಾಥಮಿಕ ಶಾಲೆ ಆರಂಭವಾಗ್ತಿವೆ. ಇಷ್ಟು ದಿನ ಮನೆಯಲ್ಲಿದ್ದ 6 ರಿಂದ 8 ನೇ ತರಗತಿ ಮಕ್ಕಳು ಕೊನೆಗೂ ಶಾಲೆಗೆ ಹೋಗೋ ಭಾಗ್ಯ ಒದಗಿಸಲಾಗಿದೆ. ಶಾಲೆ ಶುರು ಮಾಡಲು ನಿರ್ಧಾರ ತೆಗೆದುಕೊಂಡಿರೋ ಇಲಾಖೆ ಮಾರ್ಗಸೂಚಿ ರೆಡಿಮಾಡಿದೆ. ಇತ್ತ ಶಾಲೆಗಳು ಸಹ ರೆಡಿ ಸ್ಟಡಿ ಗೋ ಅಂತಾ ಪುನರಾರಂಭಗೊಳ್ಳಲು ಭರ್ಜರಿ ತಯಾರಿಕೆ ನಡೆಸುತ್ತಿದೆ. ಬೆಳಗೆದ್ದು, ತಯಾರಾಗಿ, ಬ್ಯಾಗ್ ಹೆಗಲಿಗೆ ಏರಿಸ್ಕೊಂಡು ಶಾಲೆ ಕಡೆ ಮುಖ ಮಾಡ್ತಿದ್ದ ಮಕ್ಕಳ ದಿನಚರಿ ಬದಲಿಸಿದ ಕೊರೊನಾ. ಈ ಮಹಾಮಾರಿ ದೆಸೆಯಿಂದ ಮಕ್ಕಳ ಶಾಲೆ ಕಡೆ ಮುಖ ಮಾಡದೆ ಎರಡು ವರ್ಷ ಆಗುತ್ತಿದೆ. ಸದ್ಯ 9 ರಿಂದ 12 ನೇ ತರಗತಿಯನ್ನ ಯಶಸ್ವಿಯಾಗಿ ಆರಂಭಿಸಿರೋ ಇಲಾಖೆ, ಇಲ್ಲಿಂದ 6 ರಿಂದ 8 ನೇ ತರಗತಿ ಮಕ್ಕಳ ಮನೆವಾಸ ಅಂತ್ಯಗೊಳಿಸಿದೆ. ಸರ್ಕಾರ ನಿರ್ಧರಿಸಿದಂತೆ ನಾಳೆಯಿಂದ ಪ್ರಾಥಮಿಕ ಶಾಲೆಗಳು ಮಕ್ಕಳ ಆಹ್ವಾನಕ್ಕೆ ಕಾತೊರೆಯುತ್ತಿವೆ.ದಿನ ಬಿಟ್ಟು ದಿನ ಬ್ಯಾಚ್ ಗಳಲ್ಲಿ ತರಗತಿ ನಡೆಸಲು ಸರ್ಕಾರ ಸೂಚನೆ ಹೊರಡಿಸಿದೆ, ಸೋಂಕಿನ ಹೊಡೆತ ಶೇ 2 ಕ್ಕಿಂತ ಕಡಿಮೆ ಇರೊ ಪ್ರದೇಶದಲ್ಲಿ ಮಾತ್ರ ಶಾಲೆಗಳು ಆರಂಭವಾಗುತ್ತಿದೆ. ಸೋಮವಾರ ದಿಂದ ಶುಕ್ರವಾರ ಮಾತ್ರ ತರಗತಿ ನಡೆಯಲಿದ್ದು, ಶನಿವಾರ, ಭಾನುವಾರ ಎರಡು ದಿನ ಸ್ಯಾನಿಟೈಸ್ ಮಾಡಲು ತೀರ್ಮಾನಿಸಲಾಗಿದೆ. ಇನ್ನು 6 ರಿಂದ 7 ನೇ ತರಗತಿ ಮಕ್ಕಳಿಗೆ ಬೆಳಿಗ್ಗೆ 10: 30 ರಿಂದ ಮಧ್ಯಾಹ್ನ 1:30 ನಂತರ ತರಗತಿ ನಡೆಸುವುದು, 8 ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ 2 ಗಂಟೆಯಿಂದ 4:30 ರ ತರಗತಿ ನಡೆಸಲು ಸೂಚಿಸಲಾಗಿದೆ. ಇನ್ನುಳಿದಂತೆ 9 ರಿಂದ ಪಿಯುಸಿ ಗೆ ಕೊಟ್ಟ ಎಲ್ಲಾ ಗೈಡ್ ಲೈನ್ಸ್ ಇಲ್ಲ ಈ ಶಾಲೆ ಆರಂಭದ ಬಗ್ಗೆ ಬಿಬಿಎಂಪಿ ಆಯುಕ್ತ ಪ್ರತಿಕ್ರಿಯೆ
 
ಹಾಗಿದ್ರೆ ಶಾಲೆ ಆರಂಭಕ್ಕೆ ನೀಡಿರೋ ಗೈಡ್ ಲೈನ್ಸ್ ಗಳೇನು ಅನ್ನೋದನ್ನ ನೋಡುವುದಾದ್ರೆ
 
. ಬಿಡುಗಡೆ ಬಿಡುಗಡೆ ಮಾಡಲಾಗಿರುವ SOP ಪಾಲಿಸುವುದು
 
. ಮಕ್ಕಳು ಶಾಲೆಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ
 
. ಅನುಮತಿ ಪತ್ರದಲ್ಲಿ ವಿದ್ಯಾರ್ಥಿ ಯ ಕೋವಿಡ್ ಸೋಂಕಿಲ್ಲದೆ ಇರೋದನ್ನ ಸಮಸ್ಯೆಯನ್ನು ಧೃಡೀಕರಿಸಲಾಗಿದೆ
 
೪. ಕುಡಿಯುವ ‌ನೀರು ಹಾಗೂ ಆಹಾರ ಮನೆಯಿಂದಲೇ ತರಬೇಕು
 
೫. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು
 
೬. ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ
 
೭. ಆನ್ ಲೈನ್ ತರಗತಿಗೂ ಅವಕಾಶ
 
೮. ಸೋಮವಾರ ದಿಂದ ಶುಕ್ರವಾರದವರೆಗೆ ಮಾತ್ರ ತರಗತಿ ನಡೆಸಬೇಕು
 
೯. ಉಳಿದ ಶಾಲೆಯ ಸ್ವಚ್ಚತೆ ಮಾಡಿಕೊಳ್ಳಬೇಕು.
 
ಮಕ್ಕಳಿಗೆ ಶಾಲೆಗೆ ವೆಲ್ಕಾಮ್ ಮಾಡಲು ಶಾಲೆಗಳು ಸಿದ್ಧವಾಗಿವೆ. ಎಲ್ಲಾ ಶಾಲೆಗಳಲ್ಲು ಸ್ಯಾನಿಟೈಸೇಶನ್ ಕಾರ್ಯ ಜೋರಾಗಿದೆ. ಕ್ಲಾಸ್ ರೂಮ್ಸ್, ಕಾಲೇಜ್ ಕಾರಿಡಾರ್, ಲೈಬ್ರರಿ ಕ್ಯಾಂಪಸ್ ಆವರಣದ ಪ್ರತಿ ಕಾರ್ನರನ್ನು ಬಳಸುವುದು ಇತರ ಮಕ್ಕಳ ಸುರಕ್ಷತೆಗಾಗಿ ಇಲಾಖೆ ಗೈಡ್ ಲೈನ್ಸ್ ಪ್ರಕಾರ ತಯಾರಿಕೆ ನಡೆಸಲಾಗಿದೆ. ಯಾವ ಕಾರಣಕ್ಕೂ ಭಯ ಪಡುವ ಅಗತ್ಯತೆ ಇಲ್ಲ. ಒಂದೇ ಮನಸ್ಸಿನಿಂದ ತಮ್ಮ ಮಕ್ಕಳ ಶಾಲೆಗೆ ಕಳುಹಿಸಿ ಎಂದು ಶಿಕ್ಷಣ ಸಚಿವರು ಮನವಿ ಮಾಡಿದ್ರು.ಒಟ್ನಲ್ಲಿ ಇಷ್ಟುದಿನ ಶಿಕ್ಷಣ ಕೊರತೆಯಿಂದ ದೂರವಾಗಿದ್ದ ಮಕ್ಕಳ ಬದುಕು ಸೋಮವಾರದಿಂದ ಅಸನಲಾಗಲಿದೆ. ಇನ್ನುಳಿದಂತೆ ಮುಂದಿನ ಮುಂದಿನ ಒಂದರಿಂದ ಐದನೇ ತರಗತಿಗಳು ಆರಂಭವಾಗಬೇಕಿತ್ತು, ಆ ಮಕ್ಕಳ ವಿದ್ಯಾಭ್ಯಾಸದ ಕೊರತೆ ನೀಗಿಸಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶೀಘ್ರದಲ್ಲಿ ಶಿಕ್ಷಕರ ನೇಮಕ ಕುರಿತು ನಿರ್ಧಾರ: ಬಿ.ಸಿ ನಾಗೇಶ್