ಈ ತಿಂಗಳು 23 ರಂದು 8 ರಿಂದ 12 ನೇ ತರಗತಿಗಳು ಪ್ರಾರಂಭವಾಗಲಿದೆ.ಎಸ್ ಒ ಪಿ ಪಾಲನೆ ಮಾಡಿ ಶಾಲೆ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಆದ್ರೆ ಇತ್ತಾ ಶಿಕ್ಷಣತಜ್ಞರು ಶಾಲೆ ಆರಂಭ ಮಾಡುವುದಾದ್ರೆ ಮಾಡ್ಲಿ ಆದ್ರೆ ಮಕ್ಕಳಿಗೆ ತೊಂದರೆಯಾಗದಂತೆ ಮೊದಲೇ ಮುನ್ನೆಚ್ಚರಿಕೆ ಕ್ರಮ ಸರ್ಕಾರ ಕೈಗೊಳ್ಳಬೇಕೆಂದು ಆಗ್ರಹಿಸಿದ್ರು.ಶಾಲೆ ಆರಂಭ ಮಾಡುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಪ್ರತ್ಯೇಕ ಕಮಿಟಿ ರಚಿಸಬೇಕು. ಮೊದಲು ಶಿಕ್ಷಕರನ್ನ ಫ್ರೆಂಟ್ ಲೈನ್ ವಾರಿಯರ್ಸ್ ಎಂದು ಪರಿಗಣಿಸಿ ಮೊದಲು ಶಾಲೆಯ ಶಿಕ್ಷಕರಿಗೆ , ಸಿಬ್ಬಂದಿಗಳಿಗೆ ವ್ಯಾಕ್ಸಿನ್ ಕೊಡಬೇಕು.ಅಷ್ಟೇ ಅಲ್ಲದೇ ಪ್ರತಿಯೊಬ್ಬ ಸಿಬ್ಬಂದಿಯೂ ಲಸಿಕೆ ಹಾಕಿಸಿಕೊಳ್ಳಬೇಕೆಂದು ನೋಟಿಸ್ ಬೋರ್ಡ್ ನಲ್ಲಿ ಪ್ರಕಟಿಸಬೇಕು ಎಂದು ಹೇಳಿದ್ರು. ಜೊತೆಗೆ ಇಷ್ಟೆಲ್ಲಾದರ ಮದ್ಯೆ ಪೋಷಕರು ಸರ್ಕಾರದಿಂದ ಧೈರ್ಯ ಬಯಸ್ತಿದ್ದಾರೆ.ಆದ್ದರಿಂದ ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಶಿಕ್ಷಣತಜ್ಞರು, ಪೋಷಕರು ಆಗ್ರಹಿಸಿದ್ರು.