Publish Date: Sun, 29 Aug 2021 (20:16 IST)
Updated Date: Sun, 29 Aug 2021 (20:24 IST)
ಆ್ಯಂಕರ್:- ಸರ್ಕಾರಕ್ಕೆ ಒಂದು ಕಡೆ ಶಾಲೆ ಓಪನ್ ಮಾಡುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆದ್ರೆ ಖಾಸಗಿ ಶಾಲೆಗಳು ಮಾತ್ರ ಶಾಲೆ ಪ್ರಾರಂಭ ಮಾಡುವಂತೆ ಪಟ್ಟು ಹಿಡಿದಿವೆ. ಸರ್ಕಾರ ಕೂಡ ಹಂತ ಹಂತವಾಗಿ ಶಾಲೆ ಆರಂಭಮಾಡುವುದಾಗಿ ಹೇಳಿ ಯಡವಟ್ಟಿಗೆ ಸಿಲುಕಿದೆ. ಈಗ ಖಾಸಗಿ ಶಾಲೆಗಳಿಗೆ ಇದೇ ಅಸ್ತ್ರವಾಗಿದ್ದು , ಶಾಲೆ ಆರಂಭಿಸುವಂತೆ ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಿದ್ದಾರೆ. ಈಗ 9 ರಿಂದ 12 ನೇ ತರಗತಿವರೆಗೂ ಶಾಲೆ ಓಪನ್ ಆಗಿದ್ದು , ಇನ್ನುಳಿದ ತರಗತಿಗಳನ್ನ ಆರಂಭಿಸುವುದಕ್ಕೆ ಸರ್ಕಾರ ಈಗಾಗಲೇ ಚಿಂತನೆ ನಡೆಸಿದ್ದು ನಾಳೆ ಇದೇ ವಿಷಯವಾಗಿ ಸಭೆ ನಡೆಸಲಾಗುತ್ತದೆ. ಆದಾದ ನಂತರ ಶಾಲೆ ಆರಂಭದ ಕುರಿತು ಅಂತಿಮ ನಿರ್ಧಾರ ಮುಖ್ಯಮಂತ್ರಿಗಳಿಂದ ಹೊರಬೀಳುವ ಸಾಧ್ಯತೆ ಇದೆ...