ಶಾಲಾ ವಾಹನದಲ್ಲಿ ಬಾಲಕ ನೇತಾಡಿಕೊಂಡು ಪ್ರಯಾಣಿಸಿದ್ದ ಪ್ರಕರಣ; ಚಾಲಕ ಅರೆಸ್ಟ್

ಶುಕ್ರವಾರ, 29 ನವೆಂಬರ್ 2019 (10:37 IST)
ರಾಯಚೂರು : ಶಾಲಾ ವಾಹನದಲ್ಲಿ  ಬಾಲಕ ನೇತಾಡಿಕೊಂಡು ಪ್ರಯಾಣಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ವಾಹನ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.ಚಾಲಕ ರಾಮಯ್ಯ ಬಂಧಿತ ಆರೋಪಿ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಶಾಲೆಯೊಂದರ ವಾಹನದಲ್ಲಿ ಚಾಲಕ ರಾಮಯ್ಯ  ಶಾಲಾ ವಿದ್ಯಾರ್ಥಿಯೊಬ್ಬನನ್ನು ವಾಹನದ ಹೊರಗೆ ನೇತಾಡಿಸಿಕೊಂಡು ಪ್ರಯಾಣ ಬೆಳೆಸಿದ್ದಾನೆ. ಈ ಹಿನ್ನಲೆಯಲ್ಲಿ ಬಾಲಕನ ಜೀವದ ಜೊತೆ ಆಟವಾಡಿದ ಚಾಲಕನನ್ನು ಶಾಲಾ ಆಡಳಿತ ಮಂಡಳಿ ವಜಾಗೊಳಿಸಿದೆ.


ಅಲ್ಲದೇ  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕನ ವಿರುದ್ದ ಮಾನ್ವಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 279, 336 ರಡಿ ಕೇಸ್ ದಾಖಲಾಗಿದ್ದು, ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಡಿ.ಸಿ.ತಮ್ಮಣ್ಣ ವಿರುದ್ಧ ಸಿಡಿದೆದ್ದ ಮುಂಬೈ ಜನರು. ಕಾರಣವೇನು ಗೊತ್ತಾ?