ಡಿ.ಸಿ.ತಮ್ಮಣ್ಣ ವಿರುದ್ಧ ಸಿಡಿದೆದ್ದ ಮುಂಬೈ ಜನರು. ಕಾರಣವೇನು ಗೊತ್ತಾ?

ಶುಕ್ರವಾರ, 29 ನವೆಂಬರ್ 2019 (10:15 IST)
ಮಂಡ್ಯ : ವಿರೋಧಿಗಳನ್ನು ಟೀಕಿಸುವ ಭರದಲ್ಲಿ ಮುಂಬೈಯನ್ನು ಕಾಮಾಟಿಪುರ ಎಂದು ಕರೆದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹೊಸ ವಿವಾದ ಸೃಷ್ಟಿಸಿದ್ದಾರೆ.ಕೆ.ಆರ್.ಪೇಟೆಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಡಿ.ಸಿ.ತಮ್ಮಣ್ಣ, ಬಿಜೆಪಿ ಅಭ್ಯರ್ಥಿ ನಾರಾಯಣಗೌಡರನ್ನು ಟೀಕಿಸುತ್ತಾ, ನಾರಾಯಣಗೌಡರನ್ನು ಒಂದು ವೇಳೆ ಗೆಲ್ಲಿಸಿದ್ರೆ ಕೆ.ಆರ್.ಪೇಟೆಯನ್ನು ಮುಂಬೈಯ ರೆಡ್ ಲೈಟ್ ಏರಿಯಾ ಕಾಮಾಟಿಪುರವನ್ನಾಗಿ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.


ಡಿ.ಸಿ.ತಮ್ಮಣ್ಣ ಈ ಹೇಳಿಕೆಗೆ ಮುಂಬೈನಲ್ಲಿ ವಾಸವಿರುವ ಕೆ.ಆರ್.ಪೇಟೆ ಜನ ಆಕ್ರೋಶ ವ್ಯಕ್ತಪಡಿಸಿದ್ದು, ಡಿ.ಸಿ.ತಮ್ಮಣ್ಣ ನಾರಾಯಣಗೌಡರನ್ನು ಟೀಕಿಸಲಿ, ಆದರೆ ಮುಂಬೈಯನ್ನು ಕಾಮಾಟಿಪುರ ಎಂದು ಕರೆದಿದ್ದಕ್ಕೆ ತಕ್ಷಣ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಚುನಾವಣಾ ಪ್ರಚಾರದಿಂದ ದೂರ ಉಳಿದ ಕೈ ಶಾಸಕ ಬಿ.ನಾಗೇಂದ್ರ