Select Your Language

Notifications

webdunia
webdunia
webdunia
webdunia

ಗಂಟಲ ಕಿರಿಕಿರಿ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಗಂಟಲ ಕಿರಿಕಿರಿ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಶುಕ್ರವಾರ, 29 ನವೆಂಬರ್ 2019 (08:42 IST)
ಬೆಂಗಳೂರು : ಕೆಲವೊಮ್ಮೆ ಶೀತ ಕೆಮ್ಮು ಸಮಸ್ಯೆ ಉಂಟಾದಾಗ ಗಂಟಲು ಕೆರೆತ ಶುರುವಾಗುತ್ತದೆ. ಇದರಿಂದ ಸರಿಯಾಗಿ ತಿನ್ನಲು, ಕುಡಿಯಲು, ಮಾತನಾಡಲು ಆಗದೆ ಕಿರಿಕಿರಿ ಎನಿಸುತ್ತದೆ. ಇದನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.



ಪಾತ್ರೆಯೊಂದನ್ನು ಬಿಸಿಗೆ ಇಟ್ಟು 1ಟೇಬಲ್ ಚಮಚ ಅರಶಿನ ಪುಡಿ ಹಾಕಿ ಸ್ವಲ್ಪ ಬಿಸಿ ಮಾಡಿಕೊಳ್ಳಿ. ಅದು ಬಿಸಿಯಾದಾಗ ಅದಕ್ಕೆ 1 ½ ಚಮಚ ಬೆಲ್ಲದ ಪುಡಿ ಹಾಕಿ ಮಿಕ್ಸ್ ಮಾಡಿ. ಆಗ ಅದು ಮುದ್ದೆಯ ರೀತಿಯಾಗುತ್ತದೆ. ಅದನ್ನು ತೆಗೆದು 1ಪ್ಲೇಟ್ ಗೆ ಹಾಕಿ ಬಿಸಿಯಾಗಿರುವಾಗಲೇ ಅದನ್ನು ಚಿಕ್ಕ ಚಿಕ್ಕ ಉಂಡೆಗಳನ್ನು ತಯಾರಿಸಿ.


ಇದನ್ನು ದಿನಕ್ಕೆ 3-4 ಉಂಡೆಗಳನ್ನು ಸೇವಿಸಬಹುದು. ಈ ಉಂಡೆಯನ್ನು ಬಾಯಲ್ಲಿಟ್ಟು ಚೀಪುತ್ತಾ ಮಧ್ಯ ಮಧ್ಯದಲ್ಲಿ ಬಿಸಿಬಿಸಿ ನೀರನ್ನು ಕುಡಿಯಬೇಕು. ಇದನ್ನು ಮಕ್ಕಳಿಗೂ ಕೊಡಬಹುದು. ಇದರಿಂದ ಗಂಟಲ ಕಿರಿಕರಿ ಬೇಗ ವಾಸಿಯಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೂಗಿನ ಮೇಲಿರುವ ಕಪ್ಪು ಕಲೆಗಳು ಹೋಗಲಾಡಿಸಲು ಹೀಗೆ ಮಾಡಿ