ಮುಂಬೈ: ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಸದಾ ಕಿಡಿ ಕಾರುತ್ತಿದ್ದ ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ಅನಾರೋಗ್ಯಕ್ಕೀಡಾಗಿದ್ದು ಅನೇಕ ಗಣ್ಯರು ಅವರ ಚೇತರಿಕೆಗೆ ಹಾರೈಸಿದ್ದಾರೆ.
ಉದ್ಧವ್ ಠಾಕ್ರೆ ಬಳಿಕ ಶಿವಸೇನೆಯಲ್ಲಿ ಗುರುತಿಸಿಕೊಂಡಿದ್ದ ನಾಯಕ ಸಂಜಯ್ ರಾವತ್. ಸದಾ ಒಂದಿಲ್ಲೊಂದು ಹೇಳಿಕೆಗಳಿಂದ ಕೇಂದ್ರವನ್ನು ಕುಟುಕುತ್ತಲೇ ಇದ್ದರು. ರಾಜಕೀಯದಲ್ಲಿ ಸಕ್ರಿಯರಾಗಿದ್ದ ಸಂಜಯ್ ರಾವತ್ ಈಗ ಗಂಭೀರ ಆರೋಗ್ಯ ಸಮಸ್ಯೆಯೊಂದು ಕಾಡುತ್ತಿದೆ.
ಈ ಕಾರಣಕ್ಕೆ ಕೆಲವು ದಿನಗಳ ಕಾಲ ನಾನು ಸಾರ್ವಜನಿಕ ಜೀವನದಿಂದ ದೂರವಿರಲಿದ್ದೇನೆ. ನಾನು ಗಂಭೀರ ಖಾಯಿಲೆಯೊಂದರಿಂದ ಬಳಲುತ್ತಿದ್ದೇನೆ. ವೈದ್ಯರು ಸಾರ್ವಜನಿಕವಾಗಿ ಬೆರೆಯದೇ ಮನೆಯೊಳಗೇ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎಂದು ಸಂಜಯ್ ರಾವತ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇನ್ನ, ಸಂಜಯ್ ರಾವತ್ ಅನಾರೋಗ್ಯ ಪರಿಸ್ಥಿತಿ ತಿಳಿಯುತ್ತಿದ್ದಂತೇ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ. ಇನ್ನು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಸಂಜಯ್ ರಾವತ್ ಚೇತರಿಕೆಗೆ ಹಾರೈಸುತ್ತಿದ್ದಾರೆ.