Select Your Language

Notifications

webdunia
webdunia
webdunia
webdunia

ಆಟೋ ಚಾಲಕನಿಂದ ಸ್ಯಾಂಡಲ್‌ವುಡ್‌ ನಟಿ ಮೇಲೆ ಹಲ್ಲೆ

ಆಟೋ ಚಾಲಕನಿಂದ ಸ್ಯಾಂಡಲ್‌ವುಡ್‌ ನಟಿ ಮೇಲೆ ಹಲ್ಲೆ
ಬೆಂಗಳೂರು , ಬುಧವಾರ, 19 ಸೆಪ್ಟಂಬರ್ 2018 (20:37 IST)
ಆಟೋ ಚಾಲಕನಿಗೆ ಡಬಲ್ ಚಾರ್ಜ್ ತೆಗೆದುಕೊಳ್ಳಬೇಡ. ಸರಿಯಾದ ಚಾರ್ಜ್ ತಗೋ ಎಂದು ಹೇಳಿದ್ದಕ್ಕೆ ಚಿತ್ರನಟಿಯೊಬ್ಬಳ ಮೇಲೆ ಆಟೋ ಚಾಲಕ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಬ್ಲಡ್ ಸ್ಟೋರಿ ಚಿತ್ರದ ನಾಯಕಿ ನಟಿ ಆಶ್ರಿನ್​ ಮೆಹ್ತಾ ಮೇಲೆ ಆಟೋ ಚಾಲಕನೊಬ್ಬ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗುತ್ತಿದೆ.  ನಟಿ ಕೆಲಸದ ನಿಮಿತ್ತ ಉತ್ತರಹಳ್ಳಿ ಬಳಿ ಆಟೋದಲ್ಲಿ ತೆರಳಿದ್ದಾರೆ. ಈ ವೇಳೆ ಆಟೋ ಚಾಲಕನಿಗೆ ಡಬಲ್ ಚಾರ್ಜ್ ತೆಗೆದುಕೊಳ್ಳಬೇಡ. ಸರಿಯಾದ ಚಾರ್ಜ್ ತಗೋ ಎಂದು ಹೇಳಿದ್ದಾರೆ. ಇಷ್ಟಕ್ಕೇ ಕೋಪಗೊಂಡ ಆಟೋ ಚಾಲಕ ನಟಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ‌ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ಕುರಿತು ನಟಿ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಅವರು ದೆಹಲಿಗಾದ್ರೂ ಹೋಗಲಿ, ಹಾಳಾಗಿ ಹೋಗ್ಲಿ ನಮ್ಗೇನೂ: ಶ್ರೀರಾಮುಲು ಕಿಡಿ