Select Your Language

Notifications

webdunia
webdunia
webdunia
webdunia

ಮಹಿಳಾ ಪತ್ರಕರ್ತೆ ಎದುರೆ ಪ್ಯಾಂಟ್ ಬಿಚ್ಚಿ ಹಸ್ತಮೈಥುನ ಮಾಡಿಕೊಂಡ ಆಟೋ ಡ್ರೈವರ್

ಮಹಿಳಾ ಪತ್ರಕರ್ತೆ ಎದುರೆ ಪ್ಯಾಂಟ್ ಬಿಚ್ಚಿ ಹಸ್ತಮೈಥುನ ಮಾಡಿಕೊಂಡ ಆಟೋ ಡ್ರೈವರ್
ಮುಂಬೈ , ಶನಿವಾರ, 1 ಸೆಪ್ಟಂಬರ್ 2018 (16:57 IST)
ಮುಂಬೈ : ಮಹಿಳಾ ಪತ್ರಕರ್ತೆಯೊಬ್ಬಳ ಮುಂದೆಯೇ ಆಟೋ ಡ್ರೈವರ್ ನೊರ್ವ ಪ್ಯಾಂಟ್ ಬಿಚ್ಚಿ ಹಸ್ತಮೈಥುನ ಮಾಡಿಕೊಂಡ ಆರೋಪದ ಮೇಲೆ ಬೋರಿವಲ್ಲಿ ಪೊಲೀಸರು ಆಟೋ ಡ್ರೈವರ್  ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.


ಸಂಜೆಯ ವೇಳೆ ಮುಂಬೈನ ಬೋರಿವಲ್ಲಿ ಪ್ರದೇಶದಲ್ಲಿರುವ ತನ್ನ ಮನೆಗೆ ತೆರಳಲು ಮಹಿಳಾ ಪತ್ರಕರ್ತೆ ಆಟೋ ಹತ್ತಿದಾಗ ದಾರಿ ಮಧ್ಯೆ ಆಟೋ ನಿಲ್ಲಿಸಿದ  ಡ್ರೈವರ್​ ಆಕೆಯ ಎದುರೇ ಪ್ಯಾಂಟ್ ಬಿಚ್ಚಿ ಹಸ್ತಮೈಥುನ ಮಾಡಿಕೊಳ್ಳಲು ಶುರುಮಾಡಿದ್ದಾನಂತೆ.
ಘಟನಾ ಸ್ಥಳದಿಂದ ತನ್ನ ಮನೆ ಹತ್ತಿರದಲ್ಲಿದ್ದ ಕಾರಣ ಅದರಿಂದ ಜಿಗಿದು ಓಡಿಹೋಗಿ ಮಹಿಳೆ ತನ್ನ ಮನೆ ಸೇರಿಕೊಂಡಿದ್ದಾಳೆ. ಆದರೆ ಈ ವೇಳೆ ಸ್ಥಳದಲ್ಲಿ ಕೆಲವರು ಓಡಾಡುತ್ತಿದ್ದರೂ ಕೂಡ ಅವರ್ಯಾರು ತನ್ನ ಸಹಾಯಕ್ಕೆ ಬರಲಿಲ್ಲ ಎಂದು ಮಹಿಳೆ ಬೇಸರ ವ್ಯಕ್ತಪಡಿಸಿದ್ದಾಳೆ.


ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆ ಬೋರಿವಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಆಟ್ರೋ ಟ್ರ್ಯಾಕ್​ ಮಾಡಿರುವ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಆ ಆರೋಪಿ ರಾಜ್​ಬಹುದ್ದೂರ್​ ಪಾಲ್​ ಎಂಬುದಾಗಿ ಗುರುತಿಸಲಾಗಿದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬರಗಾಲ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಸಚಿವ