Publish Date: Fri, 27 Sep 2019 (13:20 IST)
Updated Date: Fri, 27 Sep 2019 (13:23 IST)
ಈ ಜನರು ಕೆಲಸ ಮಾಡುತ್ತಿದ್ದಾರೆ. ಆದರೆ ವೇತನ ಅನ್ನೋದನ್ನು ನೋಡಿಯೇ ಹಲವಾರು ತಿಂಗಳುಗಳು ಕಳೆದಿವೆ.
ಮಂಡ್ಯದ ಕಿಕ್ಕೇರಿ ಗ್ರಾಮ ಪಂಚಾಯತಿಯ ಪೌರ ಕಾರ್ಮಿಕರು, ನೀರು ಗಂಟಿ, ಅಟೆಂಡರ್, ಕಂಪ್ಯೂಟರ್ ಅಪರೇಟರ್,
ಬಿಲ್ ಕಲೆಕ್ಟರ್ ಗಳಿಗೆ ಕಳೆದ 10 ತಿಂಗಳಿಂದ ವೇತನ ನೀಡಿಲ್ಲ ಎಂದು ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನೆಡೆಸಿದರು.
ಪಂಚಾಯಿತಿಯ ನೌಕರರು ಮಾತನಾಡಿ, ಕಳೆದ 10 ರಿಂಗಳಿದಂದ 16 ಜನರಿಗೆ ಸಂಬಳ ನೀಡಿಲ್ಲ. ನಾವು ಜೀವನ ನಡೆಸುವುದೇ ಕಷ್ಟವಾಗಿದೆ. ಕೂಡಲೇ ಪಂಚಾಯಿತಿ ಅಧಿಕಾರಿಗಳು ಸಂಬಳ ನೀಡಬೇಕು.
ಇಲ್ಲವಾದರೆ ನಾವು ಕೆಲಸ ಮಾಡುವುದಿಲ್ಲ. ಇಲ್ಲಿಯೇ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ವಿವಿಧ ವಿಭಾಗಗಳ ಸಿಬ್ಬಂದಿ ಪಾಲ್ಗೊಂಡಿದ್ದರು.