ದುಡಿದ ಹಣ ಕೈಯಲ್ಲಿ ಉಳಿಯುವುದಿಲ್ಲ ಎನ್ನುವವರು ಈ ಪರಿಹಾರವನ್ನು ಮಾಡಿ

ಸೋಮವಾರ, 5 ಆಗಸ್ಟ್ 2019 (08:57 IST)
ಬೆಂಗಳೂರು : ಕೆಲವರು ಎಷ್ಟೇ ಕಷ್ಟಪಟ್ಟು ದುಡಿದು ಹಣ ಸಂಪಾದನೆ ಮಾಡಿದರೂ ಕೂಡ ಆ ಹಣ ಕೈಯಲ್ಲಿ ಉಳಿಯದೆ ಖರ್ಚಾಗಿ ಹೋಗುತ್ತದೆ. ಅಂತವರು ವಾಸ್ತು ಶಾಸ್ತ್ರದ ಪ್ರಕಾರ ಈ ಪರಿಹಾರ ಮಾಡಿದರೆ ಎಂದೂ ನಿಮಗೆ ಹಣದ ಕೊರತೆ ಕಾಡಲ್ಲ.
ವಾಸ್ತು ಶಾಸ್ತ್ರದ ಪ್ರಕಾರ ಖರ್ಚನ್ನು ಕಡಿಮೆ ಮಾಡಿಕೊಳ್ಳಲು ನಿಮ್ಮ ಕೈಗೆ ತಿಂಗಳ ಸಂಬಳ ಬಂದ ತಕ್ಷಣ ಮೊದಲಿಗೆ ಉಪ್ಪನ್ನು ಖರೀದಿಸಬೇಕು. ಆದರೆ ಉಪ್ಪನ್ನು ಶನಿವಾರದ ದಿನದಂದು ಮಾತ್ರ ಖರೀದಿಸಬಾರದು. ಶುಭ ಶುಕ್ರವಾರದ ದಿನದಂದು ಉಪ್ಪನ್ನು ಖರೀದಿಸಿದರೆ ಆ ತಿಂಗಳ ಖರ್ಚು ಕಡಿಮೆಯಾಗುತ್ತದೆಯಂತೆ.


ಹಾಗೆಯೇ ನೀವು ಮನೆಯನ್ನು ಸ್ವಚ್ಛಗೊಳಿಸಿ ನೆಲವನ್ನು ಒರೆಸುವಾಗ  ಸ್ವಲ್ಪ ಉಪ್ಪನ್ನು ನೀರಿನಲ್ಲಿ ಹಾಕಿ ಸ್ವಚ್ಛ ಮಾಡಿದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯು ದೂರವಾಗಿ ಖರ್ಚು ಕಡಿಮೆಯಾಗುತ್ತದೆ.


ಅಲ್ಲದೇ ಶುಕ್ರವಾರದ ದಿನದಂದು ಲಕ್ಷ್ಮಿ ದೇವಿಗೆ ಅಕ್ಕಿ ಮತ್ತು ಚೆಂಡು ಹೂವಿನಿಂದ ಪೂಜೆ ಮಾಡಬೇಕು.ನಂತರ ಪೂಜೆ ಮಾಡಿದ ಅಕ್ಕಿಯನ್ನು ಸ್ವಲ್ಪ ತೆಗೆದುಕೊಂಡು ನಿಮ್ಮ ಪರ್ಸ್ ಅಥವಾ ನಿಮ್ಮ ಮನೆಯಲ್ಲಿ ಹಣವನ್ನು ಇಡುವ ಸ್ಥಳದಲ್ಲಿ ಇಟ್ಟರೆ ನಿಮ್ಮ ಖರ್ಚು ಸಹ ಕಡಿಮೆಯಾಗುವದರ ಜೊತೆಗೆ  ದುಡ್ಡಿನ ಅಭಾವ ನಿಮ್ಮನ್ನು ಎಂದಿಗೂ ಕಾಡುವುದಿಲ್ಲ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?