Select Your Language

Notifications

webdunia
webdunia
webdunia
webdunia

ಕೊಳ್ಳೆಗಾಲಯದಲ್ಲಿ ಬೆಚ್ಚಿಬಿದ್ದ ಜನ!

ಕೊಳ್ಳೆಗಾಲಯದಲ್ಲಿ ಬೆಚ್ಚಿಬಿದ್ದ ಜನ!
ಚಾಮರಾಜನಗರ , ಶುಕ್ರವಾರ, 27 ಸೆಪ್ಟಂಬರ್ 2019 (13:14 IST)
ಕೊಳ್ಳೆಗಾಲದಲ್ಲಿ ಸೃಷ್ಟಿಯಾಗಿರೋ ಅವಾಂತರಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ.


ಸತತ ಮಳೆಗೆ ಕಬಿನಿ ನಾಲೆ ಒಡೆದು ಗ್ರಾಮಕ್ಕೆ ನೀರು ನುಗ್ಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ 
ಹೊಂಡರಬಾಳು ಗ್ರಾಮದಲ್ಲಿ ನಡೆದಿದೆ.

 ಗ್ರಾಮ ಭಾಗಶಃ ಜಲಾವೃತ ಗೊಂಡಿದ್ದು, ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.  ಕೆಲವು ಮನೆಗಳಿಗೂ ನೀರು ನುಗ್ಗಿ‌ ಅವಾಂತರ ಸೃಷ್ಟಿಸಿದೆ.

ಎರಡು ತಿಂಗಳ ಹಿಂದೆಯೇ ಕಬಿನಿ ನಾಲೆಯ ದುಸ್ಥಿತಿ ಬಗ್ಗೆ ಗ್ರಾಮಸ್ಥರು ಎಂಜಿನಿಯರ್ ಗಳಿಗೆ ದೂರು ನೀಡಿದ್ದರೂ  ಎಚ್ಚೆತ್ತುಕೊಳ್ಳದೇ ಈ ಅವಾಂತರಕ್ಕೆ ಕಾರಣರಾಗಿದ್ದಾರೆ.

ಸ್ಥಳಕ್ಕೆ ಹನೂರು ಶಾಸಕ ಆರ್. ನರೇಂದ್ರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದಷ್ಟು ಬೇಗ ನಾಲೆಯನ್ನು ಸರಿಪಡಿಸಿ  ರೈತರಿಗಾಗಿರುವ ಬೆಳೆ ಹಾನಿಗೆ ತಕ್ಷಣ ಪರಿಹಾರ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಲಕ್ಷ್ಮಣ ಸವದಿ ವಿಷ ಕೊಟ್ಟರೂ ಅಮೃತವಾಗಲಿ: ಕುಮಠಳ್ಳಿ ತಿರುಗೇಟು