ಹೇಮಗಿರಿ, ಬಂಡಿಹೊಳೆ ಹತ್ತಿರದಲ್ಲಿ ಹೇಮಾವತಿ ನದಿಯ ರುದ್ರನರ್ತನ ಮುಂದುವರಿದಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿದೆ.
									
										
								
																	ಮಂಡ್ಯ ಜಿಲ್ಲೆಯ ಹೇಮಗಿರಿ, ಬಂಡಿಹೊಳೆ ಬಳಿ ಹೇಮಾವತಿ ನದಿಯ ರುದ್ರನರ್ತನ ಸಾಗಿದೆ. ಬಂಡಿಹೊಳೆ ಬಳಿ ತ್ರಿಶೂಲ್ ಜಲ ವಿದ್ಯುದಾಗಾರದೊಳಕ್ಕೆ ನುಗ್ಗಿದ ನೀರಿನಿಂದಾಗಿ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ.
									
			
			 
 			
 
 			
					
			        							
								
																	ಮಂಡ್ಯ ಹೇಮಗಿರಿ ಬಳಿ ತೆಪ್ಪೋತ್ಸವ ನಡೆಯುವ ಬೆಟ್ಟದ ಪಾದದವರೆಗೂ ಪ್ರವಾಹದ ನೀರು ನುಗ್ಗಿದೆ. ಹೇಮಾವತಿ ಅಣೆಕಟ್ಟಿನ ಮೇಲೆಯೂ ನೀರು ಭೋರ್ಗರೆಯುತ್ತಿದೆ.
									
										
								
																	ತಗ್ಗು ಪ್ರದೇಶಗಳಲ್ಲಿರುವ ಜಮೀನುಗಳಿಗೆ ನುಗ್ಗಿದ ನೀರಿನಿಂದಾಗಿ ತೆಂಗು, ಬಾಳೆ, ಅಡಿಕೆ, ಕಬ್ಬು ಬೆಳೆ ಮುಳುಗಡೆಯಾಗಿವೆ.
ಒಂದು ಲಕ್ಷ ಕ್ಯೂಸೆಕ್ಸ್ ನೀರು ಹರಿಸುವ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿ ಇನ್ನೂ ಹೆಚ್ಚಾಗಲಿರುವ ಆತಂಕ ಮನೆಮಾಡಿದೆ.
									
											
							                     
							
							
			        							
								
																	ಬಂಡಿಹೊಳೆಯ ತ್ರಿಶೂಲ್ ಜಲವಿದ್ಯುತ್ ಘಟಕದೊಳಕ್ಕೆ ನೀರು ನುಗ್ಗಿ ಎರಡು ಟರ್ಬೈನ್ ಗಳು ಮುಳುಗಡೆಯಾಗಿವೆ.   
ನದಿ ದಡದಲ್ಲಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.