ಬೆಳೆ ಪರಿಹಾರ ಹಣದ ಚೆಕ್ ನೋಡಿ ದಂಗಾದ ರೈತ

ಮಂಗಳವಾರ, 27 ಆಗಸ್ಟ್ 2019 (16:46 IST)
ಪ್ರಕೃತಿ ವಿಕೋಪದಿಂದ ರೈತ ಬೆಳೆದಿದ್ದ ಬಾಳೆ ಸಂಪೂರ್ಣ ನಾಶವಾಗಿತ್ತು. ಆದರೆ ಪರಿಹಾರ ಚೆಕ್ ಬಂದದ್ದನ್ನ ನೋಡಿರೋ ರೈತ ಕಂಗಾಲಾಗಿದ್ದಾನೆ.  

ಮಂಡ್ಯ ಜಿಲ್ಲೆಯ ಬೂಕನಕೆರೆ ಹೋಬಳಿಯ ವಿಜಯ ಹೊಸಹಳ್ಳಿ ಗ್ರಾಮದ ಸಿದ್ದೇಗೌಡರ ಮಗ  ಸಿದ್ದಲಿಂಗೇಗೌಡ (40)   ಸರ್ವೆ ನಂಬರ್ 12/5 ರಲ್ಲಿ ಸುಮಾರು 2:30 ಎಲ್ಲಿ  ಗುಂಟೆಯಲ್ಲಿ ಬಾಳೆ ಬೆಳೆದಿದ್ದರು.    

ಜೂನ್ ತಿಂಗಳಲ್ಲಿ ಪ್ರಕೃತಿ ವಿಕೋಪದಿಂದ ಮಳೆಯಿಂದ ಒಂದು ಎಕರೆ ಸಂಪೂರ್ಣ ಬೆಳೆ  ನಾಶವಾಗಿದೆ. 1 ಲಕ್ಷಕ್ಕೂ ರೂಪಾಯಿಗೂ ಹೆಚ್ಚು ಬಾಳೆ ಬೆಳೆ ನಾಶವಾಗಿತ್ತು.

ಸಂಬಂಧಪಟ್ಟ ಅಧಿಕಾರಿಗಳು ನಾನು ಬೆಳೆದಿದ್ದ ಬೆಳೆಯನ್ನು ವೀಕ್ಷಣೆ ಮಾಡಿ ಪರಿಹಾರ ಕೊಡುವುದಾಗಿ ಭರವಸೆ ನೀಡಿದ್ದರು. ಪರಿಹಾರ ಧನ ಸಹಾಯದ ಚೆಕ್ ನೋಡಿ ನನಗೆ ದಿಕ್ಕು ತೋಚದಂತಾಗಿದೆ. ಕೇವಲ 1,350 ರೂಪಾಯಿಗಳನ್ನು ಪರಿಹಾರದ ಹಣ ಎಂದು ಕೃಷ್ಣರಾಜಪೇಟೆ ಪಟ್ಟಣದ  ತಹಸೀಲ್ದಾರ್ ನೀಡಿದ್ದಾರೆ.  

ನಾನು ಸಾಲ ಮಾಡಿ ಬೆಳೆದಿದ್ದ ಬೆಳೆಗೆ ತಕ್ಕ ಬೆಲೆ ಸಿಕ್ಕಿಲ್ಲ. ಹೀಗಾಗಿ ನಾನು ಮತ್ತೆ ಆ ಚೆಕ್ಕನ್ನು ತಹಸೀಲ್ದಾರರಿಗೆ ನೀಡಿದ್ದೇನೆ. ಹೆಚ್ಚಿನ ಪರಿಹಾರಕ್ಕೆ ನಾನು ಮುಖ್ಯಮಂತ್ರಿ ಅವರಿಗೆ ಮನವಿ ಮಾಡುತ್ತಿದ್ದೇನೆ ಎಂದು ರೈತ ಹೇಳಿಕೊಂಡಿದ್ದಾನೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೈತಪ್ಪಿದ ಡಿಸಿಎಂ ಹುದ್ದೆ: ಶ್ರೀರಾಮುಲು ಬೆಂಬಲಿಗರಿಂದ ಬೆಂಕಿ