ರೆಡ್ಡಿ ಹೇಳಿಕೆ ಖಂಡಿಸಿ ಪ್ರತಿಭಟನೆ

ಶನಿವಾರ, 3 ನವೆಂಬರ್ 2018 (18:05 IST)
ನನ್ನನ್ನು ಜೈಲಿಗೆ ಕಳುಹಿಸಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಖೇಶ್ ಸಾವನ್ನಪ್ಪಿರುವುದು ಎಂದ ಜನಾರ್ಧನ್ ರೆಡ್ಡಿ ಹೇಳಿಕೆ ಖಂಡಿಸಿ ಕೊಪ್ಪಳದಲ್ಲಿ ಪ್ರತಿಭಟನೆ ಮಾಡಲಾಯಿತು.

ಕೊಪ್ಪಳದ ಅಶೋಕ್ ವೃತ್ತದಲ್ಲಿ ಪ್ರತಿಭಟನೆ ಮಾಡಿದ ಸಿದ್ದರಾಮಯ್ಯ ಅಭಿಮಾನಿಗಳು ಮತ್ತು ಹಾಲು ಮತ ಸಮಾಜ ಬಾಂಧವರು, ಜನಾರ್ದನ ರೆಡ್ಡಿ ವಿರುದ್ಧ ಘೋಷಣೆ ಕೂಗಿದರು.

ಅಮಾನವೀಯ ಹೇಳಿಕೆ ನೀಡಿರುವ ರೆಡ್ಡಿ ಈ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಇನ್ನೂ ಇದಕ್ಕೂ ಮೊದಲು ಪ್ರಮುಖ ರಸ್ತೆಗಳಲ್ಲಿ ರೆಡ್ಡಿ ವಿರುದ್ಧ ಘೋಷಣೆ ಕೂಗಿದರು. ಚಪ್ಪಲಿ ಹಾರ ಹಾಕಿರುವ ರೆಡ್ಡಿ ಫೋಟೋವನ್ನ ಮೆರವಣಿಗೆ ಮಾಡಿದರು. ಅಶೋಕ್ ವೃತ್ತದಲ್ಲಿ ರೆಡ್ಡಿ ಫೋಟೋಗೆ  ಬೆಂಕಿ ಹಚ್ಚುವ ಮುಖಾಂತರ ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನೀತಿ ಸಂಹಿತೆ ಉಲ್ಲಂಘಿಸಿದ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ