Select Your Language

Notifications

webdunia
webdunia
webdunia
webdunia

ನೀತಿ ಸಂಹಿತೆ ಉಲ್ಲಂಘಿಸಿದ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ

ನೀತಿ ಸಂಹಿತೆ ಉಲ್ಲಂಘಿಸಿದ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ
ಬಾಗಲಕೋಟೆ , ಶನಿವಾರ, 3 ನವೆಂಬರ್ 2018 (18:02 IST)
ಉಪಚುನಾವಣೆ ಹಿನ್ನೆಲೆಯಲ್ಲಿ ಜಮಖಂಡಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ನೀತಿ ಸಂಹಿತಿ ಉಲ್ಲಂಘನೆ ಮಾಡಿರುವ ಘಟನೆ ನಡೆದಿದೆ‌.

ಆರತಿ ಬೆಳಗಿದ ಮಹಿಳೆಯ ತಟ್ಟೆಯಲ್ಲಿ 100 ರೂಪಾಯಿ ನೋಟು ಇಟ್ಟ ಆನಂದ ನ್ಯಾಮಗೌಡ, ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ.

ಜಮಖಂಡಿ ತಾಲೂಕಿನ ನಾಗನೂರ ಗ್ರಾಮದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಕಾಂಗ್ರೆಸ್ ಅಭ್ಯರ್ಥಿ. ನಾಗನೂರ ಗ್ರಾಮದ ಮತಗಟ್ಟೆ ಸಂಖ್ಯೆ 97 ಹಾಗೂ 98ಕ್ಕೆ ಭೇಟಿ ನೀಡಿದ ಆನಂದ ನ್ಯಾಮಗೌಡ ಆರತಿ ತಟ್ಟೆಗೆ ಹಣ ಇಟ್ಟರು.

ಈ ವೇಳೆ ಮತಗಟ್ಟೆ ಕೇಂದ್ರದಲ್ಲಿ ಮಹಿಳೆಯರು ಆರತಿ ಬೆಳಗಿದ್ದಾರೆ. ಆರತಿ ತಟ್ಟೆಯಲ್ಲಿ 100 ರೂಪಾಯಿ ನೋಟು ಇಟ್ಟ ಆನಂದ ನ್ಯಾಮಗೌಡ. ಮತಗಟ್ಟೆ ಕೇಂದ್ರದ ಆವರಣದಲ್ಲೆ ಅಭ್ಯರ್ಥಿಯಿಂದ ನೀತಿ ಸಂಹಿತೆ ಉಲ್ಲಂಘನೆಯಾದ ಘಟನೆ ನಡೆದಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯನ್ನು ಬುಡಸಮೇತ ಕಿತ್ತುಹಾಕಬೇಕು ಎಂದವರಾರು ಗೊತ್ತಾ?