Publish Date: Wed, 19 Sep 2018 (21:15 IST)
Updated Date: Wed, 19 Sep 2018 (21:16 IST)
ಕಾಂಗ್ರೆಸ್ ಮುಖಂಡ , ವಕ್ಪ್ ಬೋರ್ಡ್ ಸದಸ್ಯರಾಗಿರುವ ಕಣಚೂರು ಮೋನು ಅವರಿಗೆ ಭೂಗತ ಪಾತಕಿ ರವಿ ಪೂಜಾರಿಯಿಂದ ಬೆದರಿಕೆ ಕರೆ ಬಂದಿದೆ.
ಥೈಲ್ಯಾಂಡಿನಿಂದ ಕಣಚೂರು ಮೋನು ಅವರಿಗೆ ಫೋನ್ ಮಾಡಿದ ರವಿ ಪೂಜಾರಿ, ತನ್ನ ಎರಡು ಮಾತು ಕೇಳದಿದ್ದರೆ ಹತ್ಯೆಗೈಯುವುದಾಗಿ ಬೆದರಿಸಿದ್ದಾನೆ. ಇದರಿಂದ ಭಯಗೊಂಡ ಕಣಚೂರು ಮೋನು ಕೂಡಲೇ ಫೋನ್ ಕಟ್ ಮಾಡಿದ್ದಾರೆ. ಆ ನಂತರ ಎಂಟು ಬಾರಿ ಕರೆ ಬಂದಿದ್ದು ಅವರು ಕರೆಯನ್ನು ಸ್ವೀಕರಿಸಲಿಲ್ಲ. ದೇರಳಕಟ್ಟೆಯಲ್ಲಿ ಕಣಚೂರು ಆಸ್ಪತ್ರೆ ನಡೆಸುತ್ತಿರುವ ಕಣಚೂರು ಮೋನು ಅವರು ವಕ್ಫ್ ಬೋರ್ಡಿನ ಸದಸ್ಯರು ಕೂಡ ಆಗಿದ್ದಾರೆ.
ಬೆದರಿಕೆ ಕರೆಯ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.