Select Your Language

Notifications

webdunia
webdunia
webdunia
webdunia

ದಕ್ಷಿಣ ವಲಯ ಐಜಿಪಿ ಹೇಳಿದ್ದೇನು ಗೊತ್ತಾ?

ದಕ್ಷಿಣ ವಲಯ ಐಜಿಪಿ ಹೇಳಿದ್ದೇನು ಗೊತ್ತಾ?
ಚಾಮರಾಜನಗರ , ಬುಧವಾರ, 19 ಸೆಪ್ಟಂಬರ್ 2018 (21:09 IST)
ದಕ್ಷಿಣ ವಲಯ ಐಜಿಪಿ ಶರತ್ ಚಂದ್ರ ಚಾಮರಾಜನಗರಕ್ಕೆ  ಭೇಟಿ ನೀಡಿ, ಬೀಟ್ ವ್ಯವಸ್ಥೆ ಸುಧಾರಣೆಗಾಗಿ ಸಾರ್ವಜನಿಕ ಸೇವೆ ಮತ್ತು ಪಾರದರ್ಶಕ ಮಾಹಿತಿ ಪಡೆಯಲು ಅನುಕೂಲವಾಗುವಂತಹ ನೂತನ ತಂತ್ರಂಶವೊಂದನ್ನ ಬಿಡುಗಡೆ ಮಾಡಿದರು.

ಬಳಿಕ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಐಜಿಪಿ ಶರತ್ ಚಂದ್ರ, ಗಡಿ ಜಿಲ್ಲೆ ಚಾಮರಾಜನಗರದ ಎರಡು ಉಪ ವಿಭಾಗದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ ಎಂದರು.

ಬೀಟ್ ಸುಧಾರಣೆಗಾಗಿ ನೂತನ ಆ್ಯಪ್ ಬಿಡುಗಡೆ ಮಾಡಿ, ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲಾಗಿದೆ. ಕೇವಲ ಪೊಲೀಸ್ ಮಾತ್ರವಲ್ಲದೆ, ಆರ್ ಟಿ ಓ, ಕಂದಾಯ, ಮೈನ್ಸ್ ಇಲಾಖೆಗಳ ಹೊಣೆಗಾರಿಕೆಯೂ ಇದೆ. ಆ ಇಲಾಖೆಗಳು ದೂರು ನೀಡಿದರೆ ಕ್ರಮ ತೆಗೆದುಕೊಳ್ಳಲಾಗುವುದು. ಜಿಲ್ಲೆಯಲ್ಲಿ ನಕ್ಸಲೈಟ್ ಮೂವ್ ಮೆಂಟ್ ಇಲ್ಲ.  ನಕ್ಸಲೈಟ್ ಚಟುವಟಿಕೆ ಕಂಡು ಬಂದಲ್ಲಿ ತಮಿಳುನಾಡು, ಕೇರಳ ಪೊಲೀಸರ ಜೊತೆ ಜಂಟಿ ಕಾರ್ಯಚರಣೆ ಮಾಡುತ್ತೇವೆ ಎಂದರು.



 

Share this Story:

Follow Webdunia kannada

ಮುಂದಿನ ಸುದ್ದಿ

ರಕ್ಷಣಾ ವೇದಿಕೆ ಅಧ್ಯಕ್ಷನಿಂದ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ