Publish Date: Fri, 22 Mar 2019 (15:18 IST)
Updated Date: Fri, 22 Mar 2019 (15:19 IST)
ಹೆತ್ತ ಅಪ್ರಾಪ್ತ ಮಗಳನ್ನೇ ತಂದೆಯೊಬ್ಬ ಅತ್ಯಾಚಾರ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಸ್ವಂತ ತಂದೆಯೇ ಅತ್ಯಾಚಾರ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.
ಅತ್ಯಾಚಾರದ ನಂತರ ಮಗಳಿಗೆ ಹೆರಿಗೆ ಆದ ಬಳಿಕ ಮನೆಯವರೇ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ರಾಗಿಗುಡ್ಡದ ಮಹಮ್ಮದ್ ಉಬೆದುಲ್ಲಾ ಶೇಖ್ (35) ಮಗಳ ಮೇಲೆ ಅತ್ಯಾಚಾರ ಮಾಡಿದ ತಂದೆಯಾಗಿದ್ದಾನೆ.
ಶಿರಸಿ ಈತನ ಹೆಂಡತಿಯ ಮನೆಯಾಗಿದ್ದು, ಇಲ್ಲಿ ಬಂದಾಗ ಅತ್ಯಾಚಾರ ಮಾಡಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಮೂಲದ ಆರೋಪಿ ತಂದೆ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ ಮಾಡಿಕೊಂಡು ಬಂದಿದ್ದು ಆಕೆ ಗರ್ಭವತಿಯಾಗಿದ್ದಾಳೆ. ಈ ವಿಷಯ ಆತನ ಹೆಂಡತಿಗೆ ತಿಳಿದಿತ್ತು. ಇದನ್ನು ಮೊದಲು ಆಕೆ ಪ್ರತಿಭಟಿಸಿದರೂ ಉಬೇದುಲ್ಲಾ ಶೇಖ್ ಹೆಂಡತಿಗೆ ಕೊಲೆ ಮಾಡುವ ಬೆದರಿಕೆ ಹಾಕಿ ಬಾಯಿ ಮುಚ್ಚಿಸಿದ್ದ ಎನ್ನಲಾಗಿದೆ.