Publish Date: Mon, 18 Mar 2019 (18:33 IST)
Updated Date: Mon, 18 Mar 2019 (18:35 IST)
ಕಾಮುಕನೊಬ್ಬ ನಾಯಿಕುನ್ನಿಯ ಮೇಲೆ ರೇಪ್ ಎಸಗಿದ ಘಟನೆ ನಗರದ ಮಾಧವರಂನಲ್ಲಿ ವರದಿಯಾಗಿದೆ. ಆರೋಪಿಯ ಕೃತ್ಯ ಎದುರು ಮನೆಯಲ್ಲಿದ್ದ ಸಿಸಿಟಿವಿಯಲ್ಲಿ ಸಂಪೂರ್ಣವಾಗಿ ಶರಣಾಗಿದೆ.
ಆರೋಪಿ ಪ್ರತಿನಿತ್ಯ ಪಾರ್ಕ್ಗೆ ತೆರಳಿ ಅಲ್ಲಿರುವ ಬೀದಿ ನಾಯಿಗಳೊಂದಿಗೆ ಆಟವಾಡುತ್ತಿರುವುದನ್ನು ನೆರೆಹೊರೆಯವರು ನೋಡಿದ್ದಾರೆ. ಒಬ್ಬ ಯುವತಿಗೆ ಅನುಮಾನ ಬಂದು ಬೆನ್ನಟ್ಟಿ ಬಂದು ನೋಡಿದಾಗ ಆರೋಪಿಯ ಹೀನ ಕೃತ್ಯ ಕಂಡು ಬೆಚ್ಚಿ ಬಿದ್ದಿದ್ದಾಳೆ.
ಕೂಡಲೇ ಪೊಲೀಸ್ ಠಾಣೆಗೆ ಕರೆ ಮಾಡಿ ಆರೋಪಿಯ ಕುಕೃತ್ಯದ ಬಗ್ಗೆ ದೂರು ನೀಡಿದ್ದಾಳೆ. ಕಳೆದ 15 ದಿನಗಳಿಂದ ಆರೋಪಿ ಇಂತಹ ಕೃತ್ಯವೆಸಗುತ್ತಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.
ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಸಿಸಿಟಿವಿ ಪರೀಶಿಲಿಸುತ್ತಿದ್ದಾರೆ. ಆದರೆ ಸಿಸಿಟಿವಿಯಲ್ಲಿ ಆರೋಪಿಯ ಮುಖ ಸ್ಪಷ್ಟವಾಗಿ ಕಾಣದಿರುವುದು ಗೊಂದಲ ಮೂಡಿಸಿದೆ. ಆದರೆ, ಶೀಘ್ರದಲ್ಲಿ ಆರೋಪಿಯನ್ನು ಬಂಧಿಸುವ ವಿಶ್ವಾಸವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.