Select Your Language

Notifications

webdunia
webdunia
webdunia
webdunia

ಜೆಡಿಎಸ್ ಮುಖಂಡರ ಮೇಲೆ ನಿಖಿಲ್ ಗರಂ

ಜೆಡಿಎಸ್ ಮುಖಂಡರ ಮೇಲೆ ನಿಖಿಲ್ ಗರಂ
ಮಂಡ್ಯ , ಶುಕ್ರವಾರ, 22 ಮಾರ್ಚ್ 2019 (14:33 IST)
ಚುನಾವಣೆ ಕಣದಲ್ಲಿ ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಜೆಡಿಎಸ್ ನಾಯಕರ ವಿರುದ್ಧವೇ ನಿಖಿಲ್ ಕುಮಾರಸ್ವಾಮಿ ಅಸಮಧಾನಗೊಂಡಿದ್ದಾರೆ. ಹೀಗಾಗಿ ಸ್ವಪಕ್ಷೀಯ ನಾಯಕರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ಜೆಡಿಎಸ್ ನಾಯಕರ ಟೀಕೆಗಳಿಗೆ ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಬೇಸತ್ತಿದ್ದಾರೆ. ಯಾರ ವಿರುದ್ಧವೂ ವೈಯಕ್ತಿಕ ಟೀಕೆ ಮಾಡದಂತೆ ಸ್ವಪಕ್ಷೀಯರಿಗೆ ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿ ವೇಳೆ ಜೆಡಿಎಸ್ ನಾಯಕರಿಗೆ ಮನವಿ ಮಾಡಿದ ನಿಖಿಲ್ ಕುಮಾರಸ್ವಾಮಿ, ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ಹಾಗೂ ಮುಂದಿನ ದಿನಗಳಲ್ಲಿ ಯಾರೂ ಕೂಡ ವೈಯಕ್ತಿಕ ಟೀಕೆ ಮಾಡಬಾರದು ಎಂದ ನಿಖಿಲ್ ಸ್ವಪಕ್ಷದವರಿಗೆ ಹೇಳಿದ್ದಾರೆ.

ಸುಮಲತಾ, ದರ್ಶನ್, ಯಶ್ ವಿರುದ್ಧ ಜೆಡಿಎಸ್ ನಾಯಕರ ಸರಣಿ ಟೀಕೆಗಳಿಂದ ನಿಖಿಲ್ ಬೇಸತ್ತಿದ್ದಾರೆ. ಕ್ಷೇತ್ರದಲ್ಲಿ ಹಾಗೂ ಮತದಾನದಲ್ಲಿ ಹಿನ್ನಡೆಯಾಗುವ ಭೀತಿಯಿಂದ ವೈಯಕ್ತಿಕ ಟೀಕೆ ಮಾಡದಂತೆ ಮನವಿ ಮಾಡಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಹೈಕೋರ್ಟ್ ಮುಖ್ಯನ್ಯಾಯಾಧೀಶರಿಗೆ ದೂರು ನೀಡಿದ್ಲು 7ನೇ ಕ್ಲಾಸ್ ಹುಡುಗಿ