Select Your Language

Notifications

webdunia
webdunia
webdunia
webdunia

ಹೈಕೋರ್ಟ್ ಮುಖ್ಯನ್ಯಾಯಾಧೀಶರಿಗೆ ದೂರು ನೀಡಿದ್ಲು 7ನೇ ಕ್ಲಾಸ್ ಹುಡುಗಿ

ಹೈಕೋರ್ಟ್ ಮುಖ್ಯನ್ಯಾಯಾಧೀಶರಿಗೆ ದೂರು ನೀಡಿದ್ಲು 7ನೇ ಕ್ಲಾಸ್ ಹುಡುಗಿ
ತುಮಕೂರು , ಶುಕ್ರವಾರ, 22 ಮಾರ್ಚ್ 2019 (14:17 IST)
ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ 7ನೇ ತರಗತಿ ವಿದ್ಯಾರ್ಥಿನಿಯೊಬ್ಬರು ಪತ್ರ ಬರೆದು ದೂರು ನೀಡಿದ ಘಟನೆ ನಡೆದಿದೆ.
ಮಧುಗಿರಿ ನ್ಯಾಯಾಲಯದ ಕ್ಲರ್ಕ್ ವೇಣುಗೋಪಾಲ ಅವರ ವಿರುದ್ಧ ಹೈ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ದೂರನ್ನು 7 ನೇ ತರಗತಿ ವಿದ್ಯಾರ್ಥಿನಿ ಬರೆದಿದ್ದಾಳೆ.

ತುಮಕೂರು ಜಿಲ್ಲೆ ಮಧುಗಿರಿ ಪಟ್ಟಣದ ಹೇಮಲತ ದೂರು ಬರೆದ‌ ವಿದ್ಯಾರ್ಥಿನಿಯಾಗಿದ್ದಾರೆ. ತನ್ನ ಸ್ನೇಹಿತ ಅನಿಲ್ ಕುಮಾರ್ ಮತ್ತು ಅನಿಲ್ ತಂದೆ ಅನಂತರಾಜುಗೆ ಆದ ಅನ್ಯಾಯದ ವಿರುದ್ಧ ದೂರಿನಲ್ಲಿ ಬರೆದಿದ್ದಾಳೆ.
ಅನಂತರಾಜು ಮಗ, ಅನಿಲ್ 4 ವರ್ಷಗಳ ಹಿಂದೆ ಅಪಘಾತದಲ್ಲಿ ತೀರಿ ಹೋಗಿದ್ದ. ಅನಿಲ್ ತಂದೆ ಅನಂತರಾಜು ನ್ಯಾಯಾಲಯದಲ್ಲಿ ಕೇಸ್ ಹಾಕಿದ್ದರು, ಜೊತೆಗೆ ಮಗನ ಸಾವಿನಿಂದ ಮನನೊಂದು ಹಾಸಿಗೆ ಹಿಡಿಸಿದ್ದರು.

ಅಪಘಾತದ ಹಣ ಬಂದರೂ, ಅನಿಲ್ ತಂದೆ ಅನಂತರಾಜುಗೆ ಕೊಡದೆ ಸತಾಯಿಸಿದ್ದರು ಕ್ಲರ್ಕ್ ವೇಣುಗೋಪಾಲ್.
ನಿನ್ನೆ ಹಣ ಕೊಡುತ್ತೇವೆಂದು ಕರೆಸಿಕೊಂಡು, ಹಣ ಕೊಡದೆ ಮತ್ತದೆ ವಿಳಂಬ ಧೋರಣೆ ತೋರಿದ್ದಾರೆ.
ಮೊದಲೇ ಅನಾರೊಗ್ಯದಿಂದ ಹಾಸಿಗೆ ಹಿಡಿದಿದ್ದ ಅನಂತರಾಜು, ನ್ಯಾಯಾಲಯದ ಆವರಣದಲ್ಲಿ ಆಟೋದಲ್ಲಿ ಸಾವನ್ನಪ್ಪಿದ್ದಾರೆ.

ಮಗನು ಇಲ್ಲ, ಮಗನ ಹಣ ಬರುತ್ತದೆಂದು ಹೋದ ಅಪ್ಪನೂ ಸಾವನ್ನಪ್ಪಿದ್ದಾನೆ. ಈ ಘಟನೆಯಿಂದ ಮನನೊಂದ ಅನಿಲ್ ಸ್ನೇಹಿತೆ ಹೇಮಲತಾ. ತನ್ನ ಸ್ನೇಹಿತ ಹಾಗೂ ಸ್ನೇಹಿತನ ತಂದೆಗಾದ ಅನ್ಯಾಯದ ವಿರುದ್ಧ ಪತ್ರದ ಮುಖೇ‌‌ನಾ ಹೈ ಕೋರ್ಟ್ ನ್ಯಾಯಾಧೀಶರಿಗೆ ದೂರು ಬರೆದು ನ್ಯಾಯ ಕೇಳಲು ಹೊರಟಿದ್ದಾಳೆ. ಅನಂತರಾಜ್ ಗೆ ಮತ್ತೊಬ್ಬ ಮಗಳಿದ್ದು, ಈಗ ಅವಳ ಗತಿಯೇನು ಎಂದು ಪ್ರಶ್ನೆ ಮಾಡಿದ್ದಾಳೆ.




Share this Story:

Follow Webdunia kannada

ಮುಂದಿನ ಸುದ್ದಿ

ಈಶ್ವರ ಖಂಡ್ರೆಗೆ ಟಿಕೆಟ್ ಡೌಟ್?