ಬೆಂಗಳೂರು : ಪ್ರಶ್ನೆ : ನನ್ನ ಮಗಳಿಗೆ 6 ವರ್ಷ ವಯಸ್ಸಾಗಿದೆ. ಆದರೆ ಆಕೆ ಇತ್ತೀಚೆಗೆ ಯಾವುದರ ಬಗ್ಗೆಯೂ ಆಸಕ್ತಿ ತೋರಿಸುತ್ತಿಲ್ಲ. ನನ್ನ ಜೊತೆ ಸರಿಯಾಗಿ ಮಾತನಾಡುತ್ತಿಲ್ಲ. ಅವಳ ಸ್ನೇಹಿತರ ಜೊತೆ ಆಟಾಡಲು ಹೋಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿದ್ದರಿಂದ ನನ್ನ ಮಗಳ ಮೇಲೂ ಇಂತಹ ಘಟನೆ ನಡೆದಿರಬಹುದಾ? ಅದನ್ನು ನಾನು ಹೇಗೆ ತಿಳಿದುಕೊಳ್ಳಲಿ.
ಉತ್ತರ : ಈ ವಯಸ್ಸಿನಲ್ಲಿ ಮಕ್ಕಳು ಸ್ಪಷ್ಟವಾಗಿ ಮಾತನಾಡುತ್ತಾರೆ ಹಾಗೂ ತಮ್ಮ ಸಮಸ್ಯೆಗಳನ್ನು ಹೇಳುತ್ತಾರೆ. ಆದ್ದರಿಂದ ಮೊದಲಿಗೆ ನಿಮ್ಮ ಮಗಳ ಜೊತೆ ನೀವು ಮೃದು ಧ್ವನಿಯಲ್ಲಿ ಮಾತನಾಡುತ್ತಾ ಅವಳ ಖಾಸಗಿ ಭಾಗವನ್ನು ಯಾರಾದರೂ ಸ್ಪರ್ಶಿಸುತ್ತಿದ್ದಾರಾ ಎಂದು ನೇರವಾಗಿ ಕೇಳಿ. ಅಥವಾ ಯಾರಾದರೂ ಆಕೆಯನ್ನು ಬೆದರಿಸುತ್ತಿದ್ದಾರಾ ಎಂದು ಕೇಳಿ. ಒಂದು ವೇಳೆ ಆಕೆಗೆ ಹೇಳಲು ಆಗದಿದ್ದಾಗ ತಕ್ಷಣ ಆಕೆಯ ಶಿಕ್ಷಕರೊಂದಿಗೆ ಮಾತನಾಡಿ ತರಗತಿಯಲ್ಲಿ ಆಕೆ ಹೇಗಿರುತ್ತಾಳೆ? ಯಾರಾದರೂ ಆಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಯೇ? ಎಂದು ಕೇಳಿ. ಹಾಗೇನಾದರೂ ನಡೆದಿದ್ದಲ್ಲಿ ತಕ್ಷಣ ಅವರನ್ನು ತರಾಟೆಗೆ ತೆಗೆದುಕೊಳ್ಳಿ. ಹಾಗೇ ನಿಮ್ಮ ಮಗಳು ಈ ಗೊಂದಲದಿಂದ ಹೊರಬರಲು ಮನೋಶಾಸ್ತ್ರಜ್ಞರನ್ನು ಭೇಟಿ ಮಾಡುವುದು ಉತ್ತಮ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.