Publish Date: Fri, 22 Mar 2019 (10:02 IST)
Updated Date: Fri, 22 Mar 2019 (10:04 IST)
ಬೆಂಗಳೂರು: ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ನಟ ಪ್ರಕಾಶ್ ರಾಜ್ ಇಂದು ನಾಮಪತ್ರ ಸಲ್ಲಿಸುತ್ತಿದ್ದಾರೆ.
ಆದರೆ ನಾಮಪತ್ರ ಸಲ್ಲಿಸುವ ಸುದ್ದಿಯನ್ನು ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಹಾಕುವಾಗ ಪ್ರಕಾಶ್ ರಾಜ್ ಮಾಡಿದ ಎಡವಟ್ಟೊಂದು ಟ್ರೋಲಿಗರ ಬಾಯಿಗೆ ಆಹಾರವಾಯಿತು.
ನಾಮಪತ್ರ ಸಲ್ಲಿಸುವ ಆಹ್ವಾನ ಪತ್ರಿಕೆಯಲ್ಲಿ 22-3-2019 ಎಂದು ದಿನಾಂಕ ಬರೆಯುವ ಬದಲು 2009 ಎಂದು ಬರೆದು ಎಡವಟ್ಟು ಮಾಡಿಕೊಂಡಿದ್ದರು. ತಪ್ಪು ಗೊತ್ತಾಗುತ್ತಿದ್ದಂತೇ ಸರಿಪಡಿಸಿಕೊಂಡರು. ಆದರೆ ಅಷ್ಟರಲ್ಲಾಗಲೇ ಟ್ರೋಲಿಗರು ‘ಪ್ರಕಾಶ್ ರಾಜ್ ಎಷ್ಟು ಮೊದಲೇ ನಾಮಪತ್ರ ಸಲ್ಲಿಸಿದ್ದಾರೆ ನೋಡ್ರಪ್ಪಾ’ ಎಂದು ಕಾಲೆಳೆದಾಗಿತ್ತು.
ಇಂದು 9 ಗಂಟೆಯಿಂದ ರಿಚ್ಮಂಡ್ ವೃತ್ತ ಮೂಲಕವಾಗಿ ಮೆರವಣಿಗೆ ಮೂಲಕ ಬಿಬಿಎಂಪಿ ಕೇಂದ್ರ ಕಚೇರಿಗೆ ತೆರಳಿ ಬಳಿಕ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ