ನವದೆಹಲಿ: ಐಪಿಎಲ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ ಆರೋಪದಲ್ಲಿ ಬಿಸಿಸಿಐನಿಂದ ಅಜೀವ ನಿಷೇಧಕ್ಕೊಳಗಾಗಿದ್ದ ವೇಗಿ ಎಸ್. ಶ್ರೀಶಾಂತ್ ಗೆ ಸುಪ್ರೀಂಕೋರ್ಟ್ ರಿಲೀಫ್ ನೀಡಿದೆ.
2013 ರ ಐಪಿಎಲ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದಾರೆಂಬ ಆರೋಪದ ವಿಚಾರಣೆ ನಡೆಸಿದ್ದ ಬಿಸಿಸಿಐ ಶಿಸ್ತು ಸಮಿತಿ ಶ್ರೀಶಾಂತ್ ಗೆ ಅಜೀವ ನಿಷೇಧ ವಿಧಿಸಿತ್ತು. ಇದರ ಬಗ್ಗೆ ಎಷ್ಟೇ ಮೇಲ್ಮನವಿ ಸಲ್ಲಿಸಿದರೂ ಶ್ರೀಶಾಂತ್ ಪರವಾಗಿ ತೀರ್ಪು ಬಂದಿರಲಿಲ್ಲ.
ಇದರ ನಡುವೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಶ್ರೀಶಾಂತ್ ಗೆ ಇದೀಗ ಸುಪ್ರೀಂಕೋರ್ಟ್ ನಿಷೇಧ ತೆರವುಗೊಳಿಸಿ ನಿರಾಳತೆ ನೀಡಿದೆ. ಅಲ್ಲದೆ, ಬಿಸಿಸಿಐ ಶ್ರೀಶಾಂತ್ ಗೆ ನೀಡಿದ್ದ ನಿಷೇಧ ಶಿಕ್ಷೆಯನ್ನು ಪುನರಾಮರ್ಶಿಸುವಂತೆ ಕೋರ್ಟ್ ಸಲಹೆ ನೀಡಿದೆ. ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಸಂತಸ ವ್ಯಕ್ತಪಡಿಸಿರುವ ವೇಗಿ ಶ್ರೀಶಾಂತ್ ಇನ್ನಾದರೂ ಬಿಸಿಸಿಐ ನನಗೆ ಆಡಲು ಅವಕಾಶ ಕೊಡಬಹುದು ಎಂದು ನಿರೀಕ್ಷಿಸುತ್ತೇನೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ