Select Your Language

Notifications

webdunia
webdunia
webdunia
webdunia

ಜೆಡಿಎಸ್​ ಗೆ ಸೇರುವಂತೆ ಸುಮಲತಾಗೆ ಆಹ್ವಾನಿಸಿದ್ರಾ ಡಿಸಿ ತಮ್ಮಣ್ಣ

ಜೆಡಿಎಸ್​ ಗೆ ಸೇರುವಂತೆ ಸುಮಲತಾಗೆ ಆಹ್ವಾನಿಸಿದ್ರಾ ಡಿಸಿ ತಮ್ಮಣ್ಣ
ಮಂಡ್ಯ , ಗುರುವಾರ, 14 ಮಾರ್ಚ್ 2019 (11:49 IST)
ಮಂಡ್ಯ : ಈ ಹಿಂದೆ ಸುಮಲತಾ ಚುನಾವಣೆಗೆ ಸ್ಪರ್ಧಿಸುವುದರ ಬಗ್ಗೆ ಸುಮಲತಾ ಹಾಗೂ  ಅಂಬರೀಶ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ ಸಾರಿಗೆ ಸಚಿವ ಡಿಸಿ ತಮ್ಮಣ್ಣನವರು ಇದೀಗ ಜೆಡಿಎಸ್​ ಗೆ ಸೇರುವಂತೆ ಸುಮಲತಾಗೆ ಆಹ್ವಾನಿಸಿದ್ದೇವು ಎಂದು ಹೇಳಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.


ಇತ್ತೀಚೆಗಷ್ಟೇ   ಸಾರಿಗೆ ಸಚಿವ ಡಿಸಿ ತಮ್ಮಣ್ಣನವರು,’ ಅಂಬರೀಶ್ ಸಚಿವರಾಗಿದ್ದಾಗ ಜನರಿಗೆ ಒಂದು ಲೋಟ ನೀರು ಕೊಟ್ಟಿಲ್ಲ. ಈಗ ಸುಮಲತಾ ಬಂದು ಏನು ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದರು. ಆದರೆ ಇದೀಗ ಸುಮಲತಾರನ್ನೇ ಜೆಡಿಎಸ್​ ಅಭ್ಯರ್ಥಿ ಮಾಡುವ ಆಸೆ ಇತ್ತು. ಇದಕ್ಕಾಗಿ ಜೆಡಿಎಸ್ ವರಿಷ್ಠರನ್ನ ಭೇಟಿ ಮಾಡಿಸಲು ಯತ್ನಿಸಿದ್ದೆ. ಸುಮಲತಾ ಅವರ ಸಂಬಂಧಿಯಾಗಿದ್ದ ಮಧು ಮೂಲಕ ಮಾಡಿದ ನನ್ನ ಯತ್ನ ವಿಫಲವಾಯಿತು. ಇದಕ್ಕಾಗಿ ನಾನು, ನನ್ನ ಮಗ ಸಕಲ ಪ್ರಯತ್ನ ಮಾಡಿದೆವು. ಆದರೆ ಈ ಸಂಧಾನಕ್ಕೆ ಸುಮಲತಾ ಅಂಬರೀಶ್​ ಒಪ್ಪಲಿಲ್ಲ ‘ ಎಂದು ಹೇಳಿದ್ದಾರೆ.


ಅಲ್ಲದೇ ‘ಎಚ್​ ಡಿ ಕುಮಾರಸ್ವಾಮಿ, ಸುಮಲತಾ ನಡುವೆ ಏನು ನಡೆದಿದೆಯೋ ಗೊತ್ತಿಲ್ಲ, ಇದಲ್ಲದೇ ಕುಮಾರಸ್ವಾಮಿಯನ್ನು ಸುಮಲತಾ ಭೇಟಿ ಮಾಡಿಸಬೇಕಿತ್ತು. ನಾನೇ ಅಭ್ಯರ್ಥಿ ಆಗುತ್ತೀನಿ ಟಿಕೆಟ್ ಕೊಡಿ ಎಂದು ಕೇಳಬೇಕಿತ್ತು’ ಎಂದು ಹೇಳಿದ್ದಾರೆ.
 ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಸುಮಲತಾ ಅವರು,’ ಡಿಸಿ ತಮ್ಮಣ್ಣನವರ ಮಾತು ನೂರಕ್ಕೆ ನೂರರಷ್ಟು ಸುಳ್ಳು ಎಂದು ಹೇಳಿದ್ದಾರೆ. ಹಾಗೇ ಸುಮಲತಾ ಅವರ ಸಂಬಂಧಿಯಾಗಿದ್ದ ಮಧು ಅವರು ಕೂಡ ‘ತಮ್ಮಣ್ಣನವರ ಮಾತು ಸುಳ್ಳು ಟಿಕೆಟ್ ಪ್ರಸ್ತಾಪ ಮಾಡಿಲ್ಲ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯತಮನ ವೀರ್ಯಾಣುವಿನಿಂದಲೇ ಈಕೆಯ ಜೀವಕ್ಕೆ ಬಂತು ಕುತ್ತು!